ವಾಷಿಂಗ್ಟನ್: ಚೀನಾ ಗೆ ಬಿಗ್ ಶಾಕ್ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು 50-100% ಸುಂಕ ವಿಧಿಸಲು ಕರೆ ಕೊಟ್ಟಿದ್ದಾರೆ.
ಎಸ್, ರಷ್ಯಾದ ಆರ್ಥಿಕ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಚೀನಾದ ಮೇಲೆ 50 ರಿಂದ 100% ರಷ್ಟು ಸುಂಕಗಳನ್ನು ವಿಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಟೋಗೆ ಕರೆ ನೀಡಿದ್ದಾರೆ.
ಎಲ್ಲಾ ನ್ಯಾಟೋ ರಾಷ್ಟ್ರಗಳು ಒಪ್ಪಿಕೊಂಡು ಅದೇ ರೀತಿ ಮಾಡಲು ಪ್ರಾರಂಭಿಸಿದಾಗ ಮತ್ತು ಎಲ್ಲಾ ನ್ಯಾಟೋ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದಾಗ, ನಾನು ರಷ್ಯಾದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸಲು ಸಿದ್ಧನಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಜೊತೆಗಿನ ಯುದ್ಧ ಮುಗಿದ ನಂತರ ಚೀನಾದ ಮೇಲಿನ 50 ರಿಂದ 100% ಸುಂಕಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬಹುದು. ಆದರೆ, ಈಗ ವಿಧಿಸಬಹುದಾದ ಸುಂಕವು ಯುದ್ಧವನ್ನು ಕೊನೆಗೊಳಿಸುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.