ಫೇಕ್ ಎನ್‌ʼಕೌಂಟರ್‌ʼಗೆ ಹೆಸರುವಾಸಿ ಆದವರು ಅಮಿತ್ ಶಾ: ಬಿಜೆಪಿ ನಾಯಕರ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿ

0
Spread the love

ಬೆಂಗಳೂರು: ಫೇಕ್ ಎನ್‌ʼಕೌಂಟರ್‌ʼಗೆ ಹೆಸರುವಾಸಿ ಆದವರು ಅಮಿತ್ ಶಾ ಎಂದು ಬಿಜೆಪಿ ನಾಯಕರ ವಿರುದ್ಧ ಎಂಎಲ್‍ಸಿ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ನಗರದಲ್ಲಿ ಸಿ.ಟಿ ರವಿ ಅವರನ್ನು ಈ ಸರ್ಕಾರ ಎನ್‍ಕೌಂಟರ್ ಮಾಡೋ ಪ್ರಯತ್ನ ಮಾಡಿತ್ತು ಎಂಬ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,

Advertisement

ಜೋಶಿಯವರು ಅಮಿತ್ ಶಾ ಸಂತತಿಯವರು. ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ ಆದವರು ಅಮಿತ್ ಶಾ. ಅವರು ಹೇಳಿಕೊಟ್ಟ ಪಾಠವನ್ನ ಜೋಶಿಯವರು ಇಲ್ಲಿ ಹೇಳ್ತಿದ್ದಾರೆ. ಬಿಜೆಪಿಯವರು ಮಾಡಿರೋದನ್ನ ಅವರು ಇಲ್ಲಿ ಮಾಡ್ತೀವಿ ಎಂದು ಅಪಾದನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ, ಬಿಜೆಪಿಯವರು ಸಂಘಪರಿವಾರದವರು ವ್ಯಸನಿಗಳು,

ವಿಕೃತರು. ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ ತನಕ ಇವರು ಅಪಪ್ರಚಾರ ಮಾಡಿಕೊಂಡು ಬರ್ತಿದ್ದಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿಯನ್ನು ಬೇರೆ ಅರ್ಥದ ಪಾರ್ಟಿ ಮಾಡೋದಕ್ಕೆ ಇವರು ಹೊರಟಿದ್ದಾರೆ. ರಾಹುಲ್ ಗಾಂಧಿ ಇವರು ಹೇಳಿದ ತರ ಅಡಿಕ್ಟ್ ಆಗಿದ್ದರೆ, 10 ಸಾವಿರ ಕಿಲೋ ಮೀಟರ್ ಭಾರತ್ ಜೋಡೋದಲ್ಲಿ ನಡೆಯೋದಕ್ಕೆ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here