31 ಕೋಟಿಗೆ ಖರೀದಿಸಿ 83 ಕೋಟಿಗೆ ಅಪಾರ್ಟ್ ಮೆಂಟ್ ಮಾರಿದ ಅಮಿತಾಬ್ ಬಚ್ಚನ್

0
Spread the love

ಮುಂಬೈ:ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಿನಿಮಾಗಳ ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಬಿಗ್ ಬಿ ಬಳಿ ಹಲವು ಐಷಾರಾಮಿ ಮನೆಗಳು, ಕಾರು, ಬಂಗಲೆ ಸೇರಿದಂತೆ ಕೊಟ್ಯಾಂತರ ಮೌಲ್ಯದ ಆಸ್ತಿ ಇದೆ. ಇದೀಗ ಅಮಿತಾಬ್ ಬಚ್ಚನ್ ಐಷಾರಾಮಿ ಬಂಗಲೆಯನ್ನ ಸೇಲ್ ಮಾಡಿ ದುಪ್ಪಟ್ಟು ಲಾಭ ಗಳಿಸಿರುವ ಮೂಲಕ ಸುದ್ದಿಯಾಗಿದ್ದಾರೆ.

Advertisement

ಅಮಿತಾಬ್ ಬಚ್ಚನ್ ಮುಂಬೈನ ಅಂಧೇರಿ ಯಲ್ಲಿರುವ ಡುಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದಾರೆ. 2021ರಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ 31 ಕೋಟಿ ರೂಪಾಯಿ ಮೊತ್ತ ನೀಡಿ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ ಬರೋಬ್ಬರಿ 83 ಕೋಟಿ ರೂಪಾಯಿಗೆ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಿದ್ದಾರೆ. ಈ ಅಪಾರ್ಟ್‌ಮೆಂಟ್ ಮಾರಾಟ ಮಾಡುವ ಮೂಲಕ ಅಮಿತಾಬ್ ಬಚ್ಚನ್ ಶೇ.168ರಷ್ಟು ಲಾಭ ಗಳಿಸಿದ್ದಾರೆ.

ಜನವರಿ 17ರಂದು ಈ ಮನೆ ಮಾರಾಟದ ನೋಂದಣಿ ಆಗಿರುವ ಮಾಹಿತಿ ಲಭ್ಯವಾಗಿದ್ದು ಈ ಮಾರಾಟ ವ್ಯವಹಾರದಲ್ಲಿ 4.98 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ ಎನ್ನಲಾಗಿದೆ. ಬಿಗ್ ಬಿ ಸೇಲ್ ಮಾಡಿದ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 529.94 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದರ ಕಾರ್ಪೆಟ್ ಪ್ರದೇಶ 5185.62 ಚದರ ಅಡಿ ಇದ್ದು ದೊಡ್ಡ ಟೆರೇಸ್ ಅನ್ನು ಸಹ ಹೊಂದಿದೆ. ಅಮಿತಾಭ್ ಬಚ್ಚನ್ ಅವರು ವಿಜಯ್ ಸಿಂಗ್ ಠಾಕೂರ್ ಮತ್ತು ಕಮಲ್ ವಿಜಯ್ ಠಾಕೋರ್ ಅವರಿಗೆ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here