ಬೆಳಗಾವಿ:– ಕಾಮುಕನೋರ್ವ ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಬುದ್ಧಿಮಾಂದ್ಯೆ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜರುಗಿದೆ.
Advertisement
ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಕಾಮುಕ ಮನೆಗೆ ಬಂದಾಗ ಯುವತಿ ಶಬ್ಧ ಮಾಡಿದ್ದಾರೆ. ತಕ್ಷಣವೇ ಮನೆ ಒಳಗೆ ಹೋಗಿರುವ ಯುವತಿಯ ಚಿಕ್ಕಪ್ಪ, ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಂತೆ ನಾಟಕವಾಡಿರುವ ಆರೋಪಿ, ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ.
ತಕ್ಷಣವೇ ಯುವತಿ ಜೊತೆಗೆ ಕಾಕತಿ ಠಾಣೆಗೆ ಆಗಮಿಸಿದ ಪೋಷಕರು, ಸಂಬಂಧಿಗಳು ದೂರು ನೀಡಿದ್ದಾರೆ. ಘಟನೆ ಬಳಿಕ ಅಲರ್ಟ್ ಆದ ಬೆಳಗಾವಿ ಗ್ರಾಮೀಣ ವಿಭಾಗದ ಪೊಲೀಸರು, ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿಯ ಕಾಕತಿ ಠಾಣೆಗೆ ಡಿಸಿಪಿ ಸ್ನೇಹಾ ಭೇಟಿ ನೀಡಿ ಸಂತ್ರಸ್ತೆಯ ವಿಚಾರಣೆ ನಡೆಸಿದ್ದಾರೆ.