ವಿಜಯಸಾಕ್ಷಿ ಸುದ್ದಿ, ಗದಗ : ನರ್ಸಿಂಗ್ ಸೇವೆಗೆ ಪ್ರಪಂಚದಾದ್ಯಂತ ವಿಫುಲವಾದ ಅವಕಾಶ ಮತ್ತು ಪ್ರೋತ್ಸಾಹಗಳಿವೆ. ವೃತ್ತಿ ಕೌಶಲ್ಯದೊಂದಿಗೆ ಶ್ರದ್ಧೆ, ನಿಷ್ಠೆಯ ಸೇವೆ ಸದಾ ಗೌರವಿಸಲ್ಪಡುತ್ತದೆ ಎಂದು ಸಂಕನೂರ ನರ್ಸಿಂಗ್ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ವಿನ್ಸೆಂಟ್ ಪಾಟೀಲ ನುಡಿದರು.
ಗದುಗಿನ ಪುರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಳ್ಗೊಂಡು ಅವರು ಮಾತನಾಡುತ್ತಿದ್ದರು.
ವೈದ್ಯಕೀಯದಲ್ಲಿ ವೇಳೆಗೆ ಬಹಳ ಮಹತ್ವ ಇರುತ್ತದೆ. ಸದಾ ರೋಗಿಗಳ ಸಂಪರ್ಕದಲ್ಲಿ ನಾವು ಇರುತ್ತೇವೆ. ಅವರ ಆರೋಗ್ಯದ ಏರಿಳಿತಗಳನ್ನು ಗಮನಿಸಿ ತಕ್ಷಣ ವೈದ್ಯರ ಸಲಹೆಯಂತೆ ಸೇವೆ ಮಾಡಿದರೆ ರೋಗಿಗಳು ಬೇಗ ಗುಣಮುಖವಾಗುತ್ತಾರೆ. ತುರ್ತು ಸಂದರ್ಭದಲ್ಲಿ ಸಮಯೋಚಿತ ಸೇವೆ ರೋಗಿಯನ್ನು ಸಾವಿನಿಂದ ದೂರ ಮಾಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸುದೀರ್ಘ 32 ವರ್ಷಗಳ ಅವಧಿಯ ನರ್ಸಿಂಗ್ ಸೇವೆ ಮಾಡಿ, ಆದರ್ಶ ನರ್ಸ್ ಆದ ಡೈನಾ ಎಸ್.ಕನವಳ್ಳಿ ಅವರನ್ನು ಸನ್ಮಾನಿಸಲಾಯಿತು.
ಡಾ. ಉಮೇಶ ವೀ.ಪುರದ, ಡಾ. ಶಂಭು ಪುರದ, ಡಾ. ಕಾವ್ಯ ಪುರದ ಮಾತನಾಡಿದರು. ಪ್ರಾಚಾರ್ಯರಾದ ಸಿಬಿಲ್ ನಿಲೂಗಲ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಶಿಫಾ, ಸುಜಾತಾ, ಹೀನಾ, ಗುರುಬಸಮ್ಮ ಮಾತನಾಡಿದರು. ವೇದಿಕೆ ಮೇಲೆ ಸುರೇಶ ಕನವಳ್ಳಿ, ಪೂರ್ವಿತಾ ಪುರದ, ಚೈತ್ರಾ, ಸಹನಾ ಉಪಸ್ಥಿತರಿದ್ದರು. ದೀಪಾ ಸ್ವಾಗತಿಸಿದರು. ರೂಪಾ ಕಾರ್ಯಕ್ರಮ ನಿರೂಪಿಸಿದರೆ, ಕರುಣಾ ವಂದಿಸಿದರು.