ವಿದ್ಯಾರ್ಥಿಗಳು ಸ್ಪೂರ್ತಿಯಿಂದ ಕಲಿಯಬೇಕು : ಅನ್ನಪೂರ್ಣ ವರವಿ

0
Amrita Bhoja Learning Material Distribution by Kadalisree Forum
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಸ್ಪೂರ್ತಿಯಿಂದ ಕಲಿಕೆಯಲ್ಲಿ ತೊಡಗಬೇಕು. ಬಾಲ್ಯವು ಮಕ್ಕಳ ಬದುಕಿಗೆ ಅಡಿಪಾಯದ ಹಂತ, ಸತತ ಓದು, ಶಿಸ್ತು-ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಒಳ್ಳೆಯ ವಿದ್ಯಾರ್ಥಿಗಳಾಗಬೇಕು ಎಂದು ಚಿಂತಕಿ ಅನ್ನಪೂರ್ಣ ವರವಿ ಹೇಳಿದರು.

Advertisement

ಅವರು ಮಂಗಳವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಗದುಗಿನ ಸರಕಾರಿ ಶಾಲೆ ನಂ. 13ರಲ್ಲಿ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.

ಬಾಲ್ಯದಲ್ಲಿಯೇ ದೇಶಾಭಿಮಾನ, ಐಕ್ಯತೆ, ಸ್ನೇಹಪರತೆ, ಸಹಬಾಳ್ವೆಯಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟ ಮಾತನಾಡಿ, ನಮ್ಮ ಬದುಕು ಸಂಸ್ಕಾರಯುತವಾಗಬೇಕು. ಬಾಲ್ಯದಲ್ಲಿಯೇ ಸಹಕಾರ, ಪ್ರೀತಿ, ಸಂಸ್ಕೃತಿಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕೆಂದರು.

ಚಿಂತಕಿ ಸುಲೋಚನಾಬಾಯಿ ಕಾಟಗಿ ಮಾತನಾಡಿ, ಶರಣರು ನಮ್ಮೆಲ್ಲರ ಬದುಕನ್ನು ಹಸನುಗೊಳಿಸಿ ಉತ್ತಮ ದಾರಿ ತೋರಲು ಸಹಾಯಕವಾಗುವ ವಚನದೀಪ್ತಿಗಳನ್ನು ಕೊಡುಗೆಯಾಗಿ ನೀಡಿದ್ದು,ಮಕ್ಕಳು ವಚನಗಳನ್ನು ಹೇಳುವ ರೂಢಿ ಮಾಡಿಕೊಳ್ಳಬೇಕೆಂದರು.

ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಗಳು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿ ಬರವಣಿಗೆ ಸಾಮಗ್ರಿಗಳನ್ನು ನೀಡಿ ಮಕ್ಕಳಿಗೆ ಅಮೂಲ್ಯಯುಕ್ತವಾದ ಹಿತನುಡಿಗಳನ್ನು ಹೇಳುತ್ತಿರುವುದು ವಿದ್ಯಾರ್ಥಿಗಳಿಗೆ ಸಂತಸವನ್ನುಂಟುಮಾಡಿದೆ ಎಂದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯೆ ಎಸ್.ಎಸ್. ಹುರಕಡ್ಲಿ ವಹಿಸಿದ್ದರು. ವೇದಿಕೆಯ ಮೇಲೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರತ್ನಾ ಪೂಜಾರ, ಸದಸ್ಯರಾದ ಲಕ್ಷ್ಮಿ ಮೊಕಾಸಿ, ಪ್ರೇಮಾ ಜಾಲವಾಡಗಿ ಉಪಸ್ಥಿತರಿದ್ದರು. ಎಸ್.ವ್ಹಿ. ಬೇವಿನಮಟ್ಟಿ ಸ್ವಾಗತಿಸಿದರು. ರವಿ ಪೂಜಾರ ನಿರೂಪಿಸಿದರು. ಜಿ.ಎಂ. ದೇವಗಿರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here