ದೇಶಾದ್ಯಂತ ಅಮುಲ್ ದುಬಾರಿ: ಗ್ರಾಹಕರಿಗೆ ಬಿಗ್ ಶಾಕ್; ಹಿಂದಿನ, ಇಂದಿನ ಬೆಲೆ ಎಷ್ಟು ಗೊತ್ತಾ!?

0
Spread the love

ನವದೆಹಲಿ:- ದೇಶಾದ್ಯಂತ ಅಮುಲ್ ಹಾಲಿನ ದರ ಏರಿಕೆ ಆಗಿದ್ದು, ಈ ಮೂಲಕ ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆ ಹೊಡೆತ ತಟ್ಟಿದಂತಾಗಲಿದೆ.

Advertisement

ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳಿಗೆ ಅನ್ವಯವಾಗುತ್ತದೆ.

ಅಮುಲ್ ಹಾಲು ದರ ಏರಿಕೆ: ಯಾವ ಪ್ಯಾಕೆಟ್​​ಗೆ ಎಷ್ಟು?

ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
ಹಳೆಯ ಬೆಲೆ: 30 ರೂ.
ಹೊಸ ಬೆಲೆ: 31 ರೂ.

ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
ಹಳೆಯ ಬೆಲೆ: 36 ರೂ.
ಹೊಸ ಬೆಲೆ: 37 ರೂ.

ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 33 ರೂ.
ಹೊಸ ಬೆಲೆ: 34 ರೂ.

ಅಮುಲ್ ಗೋಲ್ಡ್ ಹಾಲು (1 ಲೀಟರ್)
ಹಳೆಯ ಬೆಲೆ: 65 ರೂ.
ಹೊಸ ಬೆಲೆ: 67 ರೂ.

ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 24 ರೂ.
ಹೊಸ ಬೆಲೆ: 25 ರೂ.

ಅಮುಲ್ ಚಾಯ್ ಸ್ಪೆಷಲ್ ಹಾಲು (500 ಮಿ.ಲೀ)
ಹಳೆಯ ಬೆಲೆ: 31 ರೂ.
ಹೊಸ ಬೆಲೆ: 32 ರೂ.

ಅಮುಲ್ ತಾಜಾ ಹಾಲು (500 ಮಿ.ಲೀ)
ಹಳೆಯ ಬೆಲೆ: 27 ರೂ.
ಹೊಸ ಬೆಲೆ: 28 ರೂ.

ಅಮುಲ್ ತಾಜಾ ಹಾಲು (1 ಲೀಟರ್)
ಹಳೆಯ ಬೆಲೆ: 53 ರೂ.
ಹೊಸ ಬೆಲೆ: 55 ರೂ.


Spread the love

LEAVE A REPLY

Please enter your comment!
Please enter your name here