ಚಿಕ್ಕಬಳ್ಳಾಪುರದಲ್ಲಿ ಶಂಕಿತ ಡೆಂಗ್ಯೂಗೆ 18 ವರ್ಷದ ಯುವತಿ ಬಲಿ!

0
Spread the love

ಚಿಕ್ಕಬಳ್ಳಾಪುರ: ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಂಕಿತ ಡೆಂಗ್ಯೂಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ 18 ವರ್ಷದ ಯುವತಿ ಬಲಿಯಾಗಿದ್ದಾಳೆ. ಯಶಸ್ವಿನಿ (18) ಮೃತ ಯುವತಿ.

Advertisement

ಕಳೆದ ಒಂದು ವಾರದಿಂದ ತೀವ್ರತರನಾದ ಜ್ವರದಿಂದ ಬಳಲುತ್ತಿದ್ದ ಯಶಸ್ವಿನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿನಿ ಮೃತಪಟ್ಟಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 95% ಅಂಕ ಗಳಿಸಿದ್ದ ಯಶಸ್ವಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು.


Spread the love

LEAVE A REPLY

Please enter your comment!
Please enter your name here