ಬೆಂಗಳೂರು:- ಸೌಥ್ ಅಂಡ್ ಸರ್ಕಲ್ ಬಳಿ ಮಧ್ಯರಾತ್ರಿ ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್ ಹೊತ್ತಿ ಉರಿದ ಘಟನೆ ಜರುಗಿದೆ.
Advertisement
ಶಾರ್ಟ್ ಸೆಕ್ಯೂರ್ಟ್ ಅಥವಾ ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಒಂದು ಅಗ್ನಿಶಾಮಕ ವಾಹನ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ.
ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಆ್ಯಂಬುಲೆನ್ಸ್ ಚಾಲಕ ಅಂಬರೀಶ್ ಮಾತನಾಡಿ, ಜಯನಗರದಿಂದ ಬ್ಲಡ್ ಟೆಸ್ಟ್ ಸ್ಯಾಂಪಲ್ ಪಡೆಯೋಕೆ ಹೋಗ್ತಿದ್ದೆ. ಇದೇ ವೇಳೆ ಇದ್ದಕ್ಕಿದ್ದಂತೆ ಗಾಡಿ ಆಫ್ ಆಯ್ತು, ಗೇರ್ ವರ್ಕ್ ಆಗಿಲ್ಲ. ಸ್ಟೇರಿಂಗ್ ಕೂಡಾ ಜಾಮ್ ಆಯ್ತು. ಹಿಂದೆ ಹೊಗೆ ಬರ್ತಿತ್ತು. ನೋಡಿದ್ರೆ ಇಂಜಿನ್ ನಲ್ಲಿ ಬೆಂಕಿ ಕಾಣಿಸ್ತು. ಕೆಲವೇ ಸೆಕೆಂಡ್ ನಲ್ಲಿ ಬೆಂಕಿ ಜಾಸ್ತಿ ಆಯ್ತು. ನಾನ್ ಕೆಳಗಿಳಿದು ದೂರು ಓಡಿದೆ. ಯಾರೂ ಗಾಡಿಯಲ್ಲಿ ಇರ್ಲಿಲ್ಲ ಎಂದಿದ್ದಾರೆ.