ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಯವರು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾಲ ಪಡೆದವರು ಅನೇಕ ಕಾರಣಗಳಿಂದ ಸಾಲ ಮರುಪಾವತಿ ಮಾಡಲು ಕೊಂಚ ವಿಳಂಬ ಮಾಡಿದರೆ ಅವರ ಮನೆಯ ಮುಂದೆಯೇ ಕುಳಿತುಕೊಳ್ಳುವ ಪೈನಾನ್ಸ್ ನವರ ಕಿರುಕುಳಕ್ಕೆ ಅನೇಕರು ಊರು ತೊರೆದಿದ್ದು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದಾರೆ.
ಫೈನಾನ್ಸ್ ಕಂಪನಿಯವರಿAದ ಸಾಲ ಪಡೆದವರ ಮನೆಯ ಮುಂದೆ ಬೆಳಿಗ್ಗೆಯಿಂದ ರಾತ್ರಿ 11 ಗಂಟೆವರೆಗೂ ಕುಳಿತು ಅವಮಾನ, ಅವ್ಯಾಚ್ಯ ಪದ ಬಳಕೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಅನೇಕ ಮೈಕ್ರೋ ಫೈನಾನ್ಸ್ಗಳು ತಲೆ ಎತ್ತಿದ್ದು, ಯಾರ ಭಯವೂ ಇಲ್ಲದೇ ತಮ್ಮಿಷ್ಟದಂತೆ ಆಡುತ್ತಿದ್ದಾರೆ. ಆದ್ದರಿಂದ ಸಾಲ ಪಡೆದ ಅನೇಕರು ಇವರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ಆತ್ಮಹತ್ಯೆಯ ದಾರಿ ಹಿಡಿಯುವ ಮೊದಲೇ ಸಂಬಂಧಪಟ್ಟವರು ಇವುಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ ಸಂತೋಷ ಕಿಮಾಯಿ ಸ್ವೀಕರಿಸಿ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ರವಾನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಕರವೇ ಪ್ರವೀಣಶೆಟ್ಟಿ ಬಣದ ನಗರ ಘಟಕದ ಅಧ್ಯಕ್ಷ ಶ್ರೇಯಾಂಕ ಹಿರೇಮಠ, ತಾಲೂಕು ಪ್ರ.ಕಾರ್ಯದರ್ಶಿ ಅಮರೇಶ ಗಾಂಜಿ, ಚಂದ್ರು ಪಾಣಿಗಟ್ಟಿ, ಚಂದ್ರು ಬಾರ್ಕಿ, ಪ್ರಜ್ವಲ ಗಾಂಜಿ, ಇಶಾಖ ಬಿಜಾಪುರ, ಮಹೇಶ ಕರಮಣ್ಣವರ, ಸಂಜೀವ ದೇಸಾಯಿ, ಮಾಲತೇಶ ಗುರಿಕಾರ, ವೀರೇಶ ಹಗ್ಗರದ, ವಾಸು ಗೋಸಾವಿ, ಬಸನಗೌಡ ಮನ್ನಂಗಿ, ನಾಶಿರಖಾನ ಕಿತ್ತೂರ, ಗುರುರಾಜ ಲಾಲಿ, ಸೇರಿ ಅನೇಕ ಕಾರ್ಯಕರ್ತರಿದ್ದರು.



