ಧಾರವಾಡ: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಎನ್ನುವುದು ಬೇಗನೆ ಮುರಿದು ಹೋಗುತ್ತಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸುದೀರ್ಘ ದಾಂಪತ್ಯ ಜೀವನ ನಡೆಸಿದ ಆ ದಂಪತಿ ಇದೀಗ ಸಾವಿನಲ್ಲಿಯೂ ಒಂದಾಗಿದ್ದಾರೆ.
ಹೌದು ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದ 82 ವರ್ಷದ ಈಶ್ವರ ಆರೇರ್ ಮತ್ತು 73 ವರ್ಷದ ಪಾರ್ವತಿ ಆರೇರ್ ಎಂಬ ರೈತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಪಾರ್ವತಿ ಆರೇರ್ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ದಂಪತಿ ಬೆಳಿಗ್ಗೆ ಎದ್ದಿಲ್ಲ. ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು 12 ಮೊಮ್ಮಕ್ಕಳಿದ್ದಾರೆ. ಈ ದುರ್ಘಟನೆಯಿಂದ ಕುಟುಂಬಕ್ಕೆ ಆಘಾತವಾಗಿದೆ.



