ಚಾಮರಾಜನಗರ: ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್​ ಸ್ಕೂಟರ್ ಬೆಂಕಿಗಾಹುತಿ

0
Spread the love

ಚಾಮರಾಜನಗರ:- ಚಾಮರಾಜನಗರದ ಮುಬಾರಕ್ ಮೊಹಲ್ಲಾದಲ್ಲಿ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್​ ಸ್ಕೂಟರ್ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ನಡೆದಿದೆ.   ಮುಬಾರಕ್ ಮೊಹಲ್ಲಾ ನಿವಾಸಿ ಅಸಾದುಲ್ಲಾ ಎಂಬವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಇ-ಸ್ಕೂಟರ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ.

Advertisement

ನೋಡ ನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದ್ದು, ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ಚಾರ್ಜ್​ ಮಾಡಿ‌ ನಿಲ್ಲಿಸಿದ್ದ ಇ-ಸ್ಕೂಟರ್​ವೊಂದು ಹೊತ್ತಿ ಉರಿದು ಆತಂಕ ಸೃಷ್ಟಿಸಿತ್ತು. ಮುಬಾರಕ್ ಮೊಹಲ್ಲಾದಲ್ಲಿ ನಡೆದ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.


Spread the love

LEAVE A REPLY

Please enter your comment!
Please enter your name here