ಗದಗ:- ಪ್ರಯಾಣಿಕರೋರ್ವರು ಬಸ್ನಲ್ಲೇ ಬಿಟ್ಟು ಹೋಗಿದ್ದ ಚಿನ್ನಾಭರಣ, ಬೆಳ್ಳಿ, ನಗದು ಇದ್ದ ಬ್ಯಾಗ್ ಹಿಂತಿರುಗಿಸಿ ಮಹಿಳಾ ಕಂಡಕ್ಟರ್ ಮಾನವೀಯತೆ ಮೆರೆದಿರುವ ಘಟನೆ ಗದಗನಲ್ಲಿ ಜರುಗಿದೆ.
ಸಂತ್ರಸ್ಥೆಗೆ ಬ್ಯಾಗ್ ಹಿಂತಿರುಗಿಸಿದ ಮಹಿಳಾ ಕಂಡಕ್ಟರ್ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ, ನಗದು 2160 ರೂ. ಇದ್ದ ಬ್ಯಾಗ್ ಅನ್ನು ಸಂತ್ರಸ್ಥೆಗೆ ಹಿಂತಿರುಗಿಸಲಾಗಿದೆ.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕೀಲಾಬಾನು ಎಂಬ ಮಹಿಳೆಯು ಬಸ್ನಲ್ಲೇ ಬ್ಯಾಗ್ ಮರೆತು ಹೋಗಿದ್ದರು. ಈ ವೇಳೆ ಬಸ್ನಲ್ಲಿದ್ದ ಬ್ಯಾಗ್ ಗಮನಿಸಿ ನಿರ್ವಾಹಕಿ ಅನಸೂಯಾ ಅವರು, ತಮ್ಮ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಬಳಿಕ ಬೆಟಗೇರಿ ಬಡಾವಣೆ ಪೊಲೀಸರು, ಬ್ಯಾಗ್ನಲ್ಲಿದ್ದ ಪ್ಯಾನ್ ಕಾರ್ಡ್ ಮೂಲಕ ಮಹಿಳೆ ಕರೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಆಭರಣ ಹಾಗೂ ಹಣವನ್ನು ನಿರ್ವಾಹಕಿ ಹಿಂತಿರುಗಿಸಿದ್ದಾರೆ.
ನಿರ್ವಾಹಕಿಯ ಪ್ರಾಮಾಣಿಕ ಕರ್ತವ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.