ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿ ಘಟನೆ ಖಂಡನೀಯ: ಮುನಿರತ್ನ ಮೇಲಿನ ಮೊಟ್ಟೆ ದಾಳಿಗೆ ಡಾ.ಮಂಜುನಾಥ್ ಪ್ರತಿಕ್ರಿಯೆ!

0
Spread the love

ಬೆಂಗಳೂರು:- ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಡಾ. ಸಿ.ಎನ್.ಮಂಜುನಾಥ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಮುನಿರತ್ನ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್‌, ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಜೋರಾದ ಪೆಟ್ಟು ಬಿತ್ತು. ತಲೆಯಲ್ಲಿ ಉರಿ ಆಯ್ತು, ಕೂದಲು ಕೂಡ ಕಿತ್ತು ಬಂತು. ತಲೆ ಸುತ್ತು ಮತ್ತು ವಾಂತಿ ಬಂದಂತೆ ಆಗ್ತಿದೆ ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆಂದು ತಿಳಿಸಿದರು.

ಯಾವಾಗ್ಲು ಅಷ್ಟೆ, ತಲೆಗೆ ಪೆಟ್ಟು ಬಿದ್ದಂತಹ ಸಂದರ್ಭದಲ್ಲಿ ವಾಂತಿ ಬಂದಂತಾದರೆ ಸಿ.ಟಿ ಸ್ಕ್ಯಾನ್‌ ಮಾಡಿಸಬೇಕಾಗುತ್ತದೆ. ಅಕಸ್ಮಾತ್‌ ಮಿದುಳು ಒಳಗಡೆ ಏನಾದರು ತೊಂದರೆ ಆಗಿದ್ಯಾ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತದೆ. ವೈದ್ಯರ ಜೊತೆ ಮಾತನಾಡಿದ್ದೇನೆ. ಅವರು ವೈದ್ಯಕೀಯ ಪರೀಕ್ಷೆ ಮಾಡ್ತಾರೆ. ತಲೆಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್‌ ಆಗಿದೆ ಎಂದು ತಿಳಿಸಿದರು.

ಸಂವಿಧಾನಕ್ಕೆ ನಾವು ಬೆಲೆ ಕೊಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಚುನಾವಣೆಯಲ್ಲಿ ಒಬ್ಬರು ಗೆಲ್ಲೋದು ಅಥವಾ ಸೋಲುವುದು ಸ್ವಾಭಾವಿಕ. ಆದರೆ, ನಿರಂತರವಾಗಿ ಹೀಗೆ ಮಾಡುವುದು ಖಂಡನೀಯ ಎಂದರು.


Spread the love

LEAVE A REPLY

Please enter your comment!
Please enter your name here