ದಾಖಲಾಗದ ಬಿಕ್ಕು

0
Spread the love

ಒಂದು ನಗುವಿಗೆ

Advertisement

ಅದೆಷ್ಟು ಅಳಬೇಕಿಲ್ಲಿ?

ಉರುಳಿದ ಕಂಬನಿ

ಗಡಿರೇಖೆ ದಾಟುವುದೇ ಇಲ್ಲ

ಸುಡುವ ಎದೆಯೇ

ಆದಕ್ಕೀಗ ಗಮ್ಯ ಸ್ಥಾನ!

 

ಬಿಗಿ ಹಿಡಿದು ಬಿಟ್ಟ ಉಸಿರು

ಗಾಳಿಯ ಹೊಟ್ಟೆಯೊಳಗೆ

ವಿಹಿತವಾಗಿ ಕಣ್ಣ

ಬೆಳಕಿನಲಿ ಇಷ್ಟಿಷ್ಟೇ

ಇರುಳ ಬೆರಸಿ ಕೊನೆಗೆ

ಇನ್ನಿಲ್ಲವಾಗಿಸುವ ಸಂಚು

ಜಾರಿಯಲ್ಲಿರಲು

 

ಬ್ರೂಣದಲ್ಲೇ ಕರಗುವ

ಬಿಕ್ಕಳಿಕೆಯೊಂದರ

ಮರ್ಮರ ಯಾವ

ಪುಟದಲ್ಲೂ

ದಾಖಲಾಗುವುದೇ ಇಲ್ಲ

ಚಡಪಡಿಕೆಯೊಂದು

ಖಾಯಂ, ಕರುಳ ತಳದಲ್ಲಿ

 

ಕಾಲದಾತುರಕೆ

ಕಾಲೆಳೆದು ಎಲ್ಲೋ ಬಿದ್ದು

ಇನ್ನೆಲ್ಲೋ ಏಳುವ ಪರಿಗೆ

ಎಡವಿದ ಕಲ್ಲೇ ಅಣಕಿಸುವಾಗ

ಬಾಚಿ ತಬ್ಬಲು

ಎದುರಾಗುವ ಜೋಡಲಗಿನ

ನಾಜೂಕು ತೋಳುಗಳು

 

ಅಪ್ಪಿಕೊಳ್ಳಲೇಬೇಕಿದೆ

ಈ ಲೋಕ ಒಪ್ಪಿಕೊಂಡಂತೆ

ಅದೆಷ್ಟೋ ವೈರುಧ್ಯಗಳನ್ನು

ಆಗಲೇ ಅಂಕದ

ಪರದೆ ಸರಿಯುವುದು!

– ಹೊನ್ನಪ್ಪ ನೀ.ಕರೆಕನ್ನಮ್ಮನವರ.

ತಿರುಮಲಕೊಪ್ಪ.


Spread the love

LEAVE A REPLY

Please enter your comment!
Please enter your name here