HomeGadag Newsಹಾಲಕೆರೆ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಅಂದಾನಗೌಡ ಪಾಟೀಲ ಪುನರಾಯ್ಕೆ

ಹಾಲಕೆರೆ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಅಂದಾನಗೌಡ ಪಾಟೀಲ ಪುನರಾಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಂದಾನಗೌಡ ಚನ್ನವೀರಗೌಡ ಪಾಟೀಲ ಸತತ 5ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಈಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮಲ್ಲಪ್ಪ ಸಣ್ಣಅಂದಾನಪ್ಪ ಪ್ರಭಣ್ಣವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಈ ಘೋಷಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅಂದಾನಗೌಡ ಪಾಟೀಲ, ನಷ್ಟದ ಅಂಚಿನಲ್ಲಿದ್ದ ಈ ಸಂಘವನ್ನು ಕಳೆದ ನಾಲ್ಕು ಅವಧಿಯಲ್ಲಿ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಲಾಭದಾಯಕ ಸಂಘವನ್ನಾಗಿ ಮಾಡಿದ್ದೇನೆ. ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಸಂಘಕ್ಕೆ ನೂತನ ಕಟ್ಟಡವನ್ನು ಸಹ ನಿರ್ಮಿಸಲಾಗಿದೆ. ಕಳೆದ ಅವಧಿಯಲ್ಲಿ ಸಂಘವು ಎರಡು ಕೋಟಿ ರೂ. ಸಾಲ ನೀಡಿದೆ. ಈಗ ನಬಾರ್ಡ್ನಿಂದ ಬರಬೇಕಾದ ಅನುದಾನ ಕಡಿಮೆಯಾಗಿರುವದರಿಂದ ಸಾಲ ನೀಡುವುದು ಕಡಿಮೆಯಾಗಬಹುದು. ಮತ್ತೆ ಮೊದಲಿನ ಸ್ಥಿತಿಗೆ ಬಂದರೆ ರೈತರಿಗೆ ಸಾಕಷ್ಟು ಅನುಕೂಲತೆಗಳನ್ನು ಮಾಡಿಕೊಡಲಾಗುವುದೆಂದರು.

ಚುನಾವಣೆಯಲ್ಲಿ ಅಂದಾನಗೌಡ ಪಾಟೀಲ ಅಧ್ಯಕ್ಷ (ಸಾಲಗಾರರ ಸಾಮಾನ್ಯ), ಮಲ್ಲಪ್ಪ ಸಣ್ಣಅಂದಾನಪ್ಪ ಪ್ರಭಣ್ಣವರ ಉಪಾಧ್ಯಕ್ಷ (ಸಾಲಗಾರರ ಹಿಂದುಳಿದ ವರ್ಗ ಅ), ಮಲ್ಲಪ್ಪ ಲಕ್ಷ್ಮಪ್ಪ ಕಳ್ಳಿಗುಡ್ಡ (ಸಾಲಗಾರರ ಸಾಮಾನ್ಯ), ಅಂದಪ್ಪ ಭೀಮಪ್ಪ ಹೊಕ್ಕಳದ (ಸಾಲಗಾರರ ಸಾಮಾನ್ಯ), ಶಿದ್ದಪ್ಪ ಬಾಳಪ್ಪ ಗೆದಗೇರಿ (ಸಾಲಗಾರರ ಸಾಮಾನ್ಯ), ಅಂದಾನಗೌಡ ಮುದಕನಗೌಡ ಪಾಟೀಲ (ಸಾಲಗಾರರ ಸಾಮಾನ್ಯ), ಶೈಲಜಾ ತಿಮ್ಮನಗೌಡ ಮುಲ್ಕಿಪಾಟೀಲ (ಸಾಲಗಾರರ ಮಹಿಳಾ), ಶಾಂತಮ್ಮ ರುದ್ರಪ್ಪ ತೋಟದ (ಸಾಲಗಾರರ ಮಹಿಳಾ), ಬಸವರಾಜ ರಾಚಪ್ಪ ಬಳ್ಳಾರಿ (ಸಾಲಗಾರರ ಹಿಂದುಳಿದ ವರ್ಗ ಬ), ಬಸಪ್ಪ ಹನಮಪ್ಪ ಮೂಲಿಮನಿ (ಸಾಲಗಾರರ ಪರಿಶಿಷ್ಟ ಜಾತಿ), ಹನಮಪ್ಪ ಬಾಳಪ್ಪ ತೊಂಡಿಹಾಳ (ಸಾಲಗಾರರ ಪರಿಶಿಷ್ಟ ಪಂಗಡ), ಕಲ್ಲಪ್ಪ ರಾಮಪ್ಪ ಮಡಿವಾಳರ (ಬಿನ್ ಸಾಲಗಾರರ) ಆಯ್ಕೆಯಾದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!