ಬೆಂಗಳೂರು: ಇನ್ಸ್ಟಾಗ್ರಾಂ ಮೂಲಕ ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರೆಸಿ ಮಾರ್ತಿದ್ದ ಬಟ್ಟೆ ವ್ಯಾಪರಿಯನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತೌನೇಶ್ ಬಂಧಿತ ಆರೋಪಿಯಾಗಿದ್ದು, ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಂಧ್ರಹಳ್ಳಿಯ ಕಾಲೇಜೊಂದರ ಬಳಿ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಆರೋಪಿ ಬಳಿಯಿದ್ದ 2 ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ತೌನೇಶ್‌ಗೆ ಕೇರಳ ಮೂಲದ ಸೈಜು ಎಂಬಾತನಿಂದ ಹೈಡ್ರೋ ಗಾಂಜಾ ಬರುತ್ತಿತ್ತು ಎನ್ನಲಾಗಿದೆ.
ಬಟ್ಟೆ ವ್ಯಾಪಾರಿಯಾಗಿರುವ ತೌನೇಶ್ 2020 ರಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ 4 ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



