ಬೆಂಗಳೂರಿನಲ್ಲಿ ಪಾಕ್ ಪ್ರಜೆಗಳಿಗೆ ಅಕ್ರಮ ವಾಸಿಸಲು ಸಹಾಯ ಮಾಡಿದ್ದವ ಅಂದರ್!

0
Spread the love

ಬೆಂಗಳೂರು:- ಪಾಕಿಸ್ತಾನ ಪ್ರಜೆಗಳು ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದ ಆರೋಪಿಯನ್ಬ ಅರೆಸ್ಟ್ ಮಾಡಲಾಗಿದೆ.

Advertisement

ಬಂಧಿತ ವ್ಯಕ್ತಿಯನ್ನು ಪರ್ವೇಜ್​ ಅಹ್ಮದ್​​ ಎಂದು ಗುರುತಿಸಲಾಗಿದೆ. ಹಿಂದೂ ಹೆಸರುಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ನೆಲಸಿದ್ದ ಐದಕ್ಕೂ ಹೆಚ್ಚು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಕಳೆದ ವಾರ ಬೆಂಗಳೂರು ಪೊಲೀಸರು ಬಂಧಿಸಿದ್ದರು.

ಆನೆಕಲ್​ ತಾಲೂಕಿನ ಜಿಗಣಿಯಲ್ಲಿ ವಾಸವಾಗಿದ್ದ ರಷೀದ್​ ಅಲಿ ಸಿದ್ದಕಿ ಕುಟುಂಬ ಮತ್ತು ಪೀಣ್ಯದಲ್ಲಿ ವಾಸವಾಗಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಕ್ರಮವಾಗಿ ಭಾರತದ ಒಳಗೆ ನುಸುಳಿ, ಇಲ್ಲಿಯ ಆಧಾರ ಕಾರ್ಡ್​​, ಪ್ಯಾನ್​ ಕಾರ್ಡ್​ ಮತ್ತು ಪಾಸಪೋರ್ಟ್​​ ಮಾಡಿಸಿಕೊಂಡಿದ್ದಾರೆ.

ಆರೋಪಿಗಳು ದಾಖಲಾತಿಗಳನ್ನು ಹೊಂದಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಲು ಜಿಗಣಿ ಪೊಲೀಸರು ಎರಡು ತಂಡಗಳಾಗಿ ಮುಂಬೈ ಮತ್ತು ದೆಹಲಿಗೆ ತೆರಳಿದ್ದರು. ಇದೀಗ, ಜಿಗಣಿ ಪೊಲೀಸರು ಪಾಕಿಸ್ತಾನಿ ಪ್ರಜೆಗಳು ಭಾರತೀಯ ದಾಖಲಾತಿ ಹೊಂದಲು ಸಹಾಯ ಮಾಡಿದ ಪರ್ವೇಜ್​​ ಅಹ್ಮದ್​ನನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.

​​ಬಂಧಿತ ಆರೋಪಿಗಳು ಅಂತರಾಷ್ಟ್ರೀಯ ಮೆಹದಿ ಫೌಂಡೇಶನ್​ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಪರ್ವೇಜ್ 2007ರಿಂದ ಎಮ್​ಎಫ್​ಐ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here