ಬೆಂಗಳೂರು:- ಹೆಚ್ಎಸ್ಆರ್ ಲೇಔಟ್ ಪೊಲೀಸರು ತನಿಖೆ ಚುರುಕುಗೊಳಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ.
Advertisement
ಕೊರಿಯೋಗ್ರಾಫರ್ ಆಗಿರುವ ಅತ್ಯಾಚಾರ ಆರೋಪಿ ನಿನ್ನೆ ಕೋರಮಂಗಲ ಪಬ್ಗೆ ಪಾರ್ಟಿಗೆ ಬಂದಿದ್ದ. ಮನೆಗೆ ತೆರಳುವಾಗ ಯುವತಿ ಡ್ರಾಪ್ ಕೇಳಿದ್ದಾಳೆ.
ಯುವತಿ ಕೂಡ ಕೋರಮಂಗಲದ ಪಬ್ನಲ್ಲಿ ಪಾರ್ಟಿ ಮುಗಿಸಿ ಹೊರಟಿದ್ದಳು. ಇನ್ನು ಡ್ರಾಪ್ ಮಾಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಆರೋಪಿ ಅತ್ಯಾಚಾರದ ವೇಳೆ ಯುವತಿಯ ಬಟ್ಟೆ ಹರಿದು ದುಷ್ಕೃತ್ಯ ಮೆರೆದಿದ್ದಾನೆ.
ಈ ವೇಳೆ ಯುವತಿ ಕೂಡ ಈತನ ಕೃತ್ಯಕ್ಕೆ ಪ್ರತಿರೋಧ ಒಡ್ಡಿದ್ದು ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಾಳೆ. ಅಲ್ಲದೆ ಇದೇ ವೇಳೆ ಯುವತಿಯ ಸ್ನೇಹಿತರು ಕೂಡ ಸ್ಥಳಕ್ಕೆ ಬಂದಿದ್ದು ಇದರಿಂದ ಹೆದರಿ ಆರೋಪಿ ಮನೆಗೆ ಬಂದಿದ್ದ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.