ತಿರುಪತಿ: ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
Advertisement
ಕಳೆದ 5 ವರ್ಷದ ಅವಧಿಯಲ್ಲಿ ದೇವಾಲಯದಲ್ಲಿ ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳೊಂದಿಗೆ ತಯಾರಿಸಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 48.76 ಕೋಟಿ ಲಡ್ಡುಗಳು ವಿತರಣೆಗೊಂಡಿದ್ದು, ಈ ಪ್ರಕರಣ ಬೆಳಕಿಗೆ ಬಂದ ನಂತರ ಕೇಂದ್ರ ತನಿಖಾ ದಳದ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಪೂರೈಕೆದಾರರು ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಎಂದು ಪತ್ತೆ ಮಾಡಲಾಗಿದೆ. ಸುಮಾರು 11 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರೂ ಪ್ರಸಾದವನ್ನು ಪ್ರತ್ಯೇಕವಾಗಿ ಲೇಬಲ್ ಮಾಡದ ಕಾರಣ, ಯಾರು ಕಲಬೆರಕೆ ಲಡ್ಡುಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿಯುವುದು ಅಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.


