Andre Russell: ಐಪಿಎಲ್‌ʼಗೆ ದಿಢೀರ್ ಗುಡ್‌ ಬೈ ಹೇಳಿದ ಆ್ಯಂಡ್ರೆ ರಸೆಲ್!

0
Spread the love

ವೆಸ್ಟ್ ಇಂಡೀಸ್‌ನ ದಿಗ್ಗಜ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಬಿಡುಗಡೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ರಸೆಲ್, ಮುಂದಿನ ಸೀಸನ್‌ನಲ್ಲಿ ಬೇರೆ ಯಾವುದೇ ತಂಡದ ಪರ ಆಡಲು ಆಸಕ್ತಿ ತೋರದ ಕಾರಣ ಐಪಿಎಲ್ ಕರಿಯರ್‌ಗೆ ತೆರೆ ಎಳೆಯುವ ನಿರ್ಧಾರ ಮಾಡಿದ್ದಾರೆ.

Advertisement

“ನನ್ನ ಐಪಿಎಲ್ ಬೂಟ್‌ಗಳನ್ನು ನೇತು ಹಾಕುತ್ತಿದ್ದೇನೆ, ಆದರೆ ಇದು ದುಃಖದ ನಿರ್ಧಾರವಲ್ಲ. ಕಳೆದ 12 ಸೀಸನ್‌ಗಳ ನೆನಪುಗಳು, ಕೆಕೆಆರ್ ಕುಟುಂಬದ ಪ್ರೀತಿ ನನ್ನೊಂದಿಗೇ ಇರುತ್ತದೆ. ನಾನು ಇನ್ನೂ ಜಗತ್ತಿನ ಇತರ ಲೀಗ್‌ಗಳಲ್ಲಿ ಆಡುತ್ತೇನೆ, ಆದರೆ ಕೆಕೆಆರ್ ಅನ್ನು ಬಿಟ್ಟು ಹೋಗುವುದಿಲ್ಲ,” ಎಂದು ರಸೆಲ್ ತಿಳಿಸಿದ್ದಾರೆ.

ಐಪಿಎಲ್‌ಗೆ ವಿದಾಯದ ಜೊತೆಗೆ ಅವರು ಕೆಕೆಆರ್ ಪರ ಹೊಸ ಪಾತ್ರವನ್ನೂ ಘೋಷಿಸಿದ್ದಾರೆ. ಮುಂದಿನ ಸೀಸನ್‌ನಿಂದ ರಸೆಲ್ ‘ಪವರ್ ಕೋಚ್’ ಆಗಿ ತಂಡಕ್ಕೆ ಸೇವೆ ಸಲ್ಲಿಸಲಿದ್ದಾರೆ. ಕೆಕೆಆರ್‌ನಿಂದಲೇ ತನ್ನ ಎರಡನೇ ಇನಿಂಗ್ಸ್ ಆರಂಭಿಸುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.

2012ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಪ್ರವೇಶಿಸಿಕೊಂಡ ರಸೆಲ್, 2014ರಲ್ಲಿ ಕೆಕೆಆರ್‌ಗೆ ಸೇರಿದ್ದರು. 12 ಸೀಸನ್‌ಗಳಲ್ಲಿ 139 ಪಂದ್ಯಗಳಲ್ಲಿ ಭಾಗವಹಿಸಿದ್ದ ಅವರು 115 ಇನಿಂಗ್ಸ್‌ಗಳಲ್ಲಿ 2651 ರನ್ (12 ಅರ್ಧಶತಕ), 123 ವಿಕೆಟ್‌ಗಳನ್ನು ಪಡೆದು ಗಮನಸೆಳೆದಿದ್ದರು. 2014 ಮತ್ತು 2024ರಲ್ಲಿ ಕೆಕೆಆರ್ ಚಾಂಪಿಯನ್ ಆಗಲು ರಸೆಲ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಈಗ ಆಟಗಾರನಾಗಿ ಅಧ್ಯಾಯ ಮುಗಿಸಿದ್ದ ರಸೆಲ್, ಕೆಕೆಆರ್ ‘ಪವರ್ ಕೋಚ್’ ಆಗಿ ಹೊಸ ಪ್ರಯಾಣ ಆರಂಭಿಸಲು ಸಜ್ಜಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here