ಪುಟಾಣಿ ಮಕ್ಕಳಿಂದ `ಅಂಗನವಾಡಿ ಹಬ್ಬ’

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 36ರಲ್ಲಿ ಪುಟಾಣಿ ಮಕ್ಕಳಿಂದ ಅಂಗನವಾಡಿ ಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು.

Advertisement

ಪ್ರಾಥಮಿಕ ಶಾಲಾ ಹಂತದಲ್ಲಿ ಚಿಣ್ಣರ ಮೇಳ, ಕಲಿಕಾ ಹಬ್ಬ, ಕಲೋತ್ಸವ, ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವದಂತಹ ಅನೆಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅಂಗನವಾಡಿ ಕೇಂದ್ರಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿಯೇ ಪ್ರಥಮ ಎನ್ನಬಹುದಾದ ಈ ಅಂಗನವಾಡಿ ಹಬ್ಬ ಹೊಸತನವನ್ನು ಸೃಷ್ಟಿ ಮಾಡಿದ್ದು, ಚಿಣ್ಣರು ವಿವಿಧ ವೇಷಭೂಷಣಗಳಿಂದ ಕಂಗೊಳಿಸಿದರು.

ಇದೇ ಮಾದರಿಯಲ್ಲಿ ಮಂಗಳವಾರ ಮಾಡಳ್ಳಿ ಗ್ರಾಮದ ಮಕ್ಕಳ ಜಾಗೃತಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉತ್ಸಾಹದಿಂದ ಅಂಗನವಾಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ಹಳ್ಳಿಯ ಸೊಗಡಿನ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಅಪ್ಪಟ ದೇಸೀ ಸೊಗಡಿನಲ್ಲಿ ಕಂಡುಬಂದರು. ಅಲ್ಲದೆ ಅಂಗನವಾಡಿ ಶಿಕ್ಷಕಿಯಾಗಿ ಓರ್ವ ವಿದ್ಯಾರ್ಥಿ ಪಾಠ ಹೇಳಿದ್ದು ಸಹ ಗಮನ ಸೆಳೆಯಿತು.

ಯಳವತ್ತಿ ವಲಯದಲ್ಲಿ ಮಕ್ಕಳ ಜಾಗೃತಿ ಸಂಸ್ಥೆಯವರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ತಾಲೂಕು ವ್ಯಾಪ್ತಿಯ ಮಾಡಳ್ಳಿ ಗ್ರಾಮದ ಕೇಂದ್ರ ಸಂಖ್ಯೆ 36ರಲ್ಲಿ ಅಂಗನಾಡಿ ಹಬ್ಬ ಆಚರಣೆ ವಿನೂತನ ಪ್ರಯೋಗವಾಗಿದೆ. ಮಕ್ಕಳ ಪ್ರತಿಭೆಗೆ ಇದೊಂದು ವೇದಿಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ಮೃತ್ಯುಂಜಯ ಜಿ ಅಭಿಪ್ರಾಯಪಟ್ಟರು.

ಶಾಲಾ ಹಂತದ ಮಕ್ಕಳಿಗೆ ಮಾತ್ರ ಸೀಮಿತವಾಗುತ್ತಿದ್ದ ಮಕ್ಕಳ ಹಬ್ಬವನ್ನು ಅಂಗನವಾಡಿ ಹಬ್ಬವನ್ನಾಗಿ ಆಚರಣೆ ಮಾಡಲು ನಿರ್ಧರಿಸಿದಾಗ ಇಲಾಖೆ ಅಧಿಕಾರಿಗಳು, ಗ್ರಾಮದ ನಾಗರಿಕರು, ಮಕ್ಕಳ ಜಾಗೃತಿ ಸಂಸ್ಥೆಯವರು ಸಹಕಾರ ನೀಡಿದ್ದು, ಮಕ್ಕಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ತಿಳಿಸಿಕೊಡುವ ಕಾರ್ಯ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಈರಮ್ಮ ಅಂಗಡಿ ಸಂತಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here