ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆ್ಯಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆಯ 2025ರ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ. 55.22ರಷ್ಟಾಗಿದೆ. ಶಿಫಾಹರ್ಮೈನ್ ಎಸ್.ಖಲೀಫಾ, ಶೇ.92ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ, ತಬಸ್ಸುಮ ಎಸ್.ಅಣ್ಣಿಗೇರಿ ಶೇ 86.4ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ, ಆಫೀಯಾ ಬಿ.ನದಾಫ್ ಶೇ 85.6ರಷ್ಟು ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
Advertisement
ಈ ವಿದ್ಯಾರ್ಥಿನಿಯರ ಸಾಧನೆಯನ್ನು ಶಿಕ್ಷಣ ಸಂಸ್ಥೆಯ ಚೇರಮನ್ ಹಾಜಿ ಜನಾಬ ಸರ್ಫರಾಜಅಹ್ಮದ ಎಸ್.ಉಮಚಗಿ, ಉಪಾಧ್ಯಕ್ಷ ಹಾಜಿ ಎ.ಎಂ. ಸೌದಾಗರ, ಕಾರ್ಯದರ್ಶಿ ಜನಾಬ ಎಂ.ಎಂ. ಶೇಖ, ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರಾದ ಜನಾಬ ಎಲ್.ಆರ್. ಇಟಗಿ, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.