ಧಾರವಾಡ: ಪ್ರಾಣಿ ರಕ್ಷಕನೋರ್ವ ಗರ್ಭಿಣಿ ಜಿಂಕೆ ರಕ್ಷಣೆ ಮಾಡಿರುವ ಘಟನೆ ನಗರದ ಬೆಲ್ಲದ ನಗರದ ಹತ್ತಿರ ಜರುಗಿದೆ. ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಣಿ ಪ್ರಿಯ ಜಿಂಕೆ ಪ್ರಾಣ ಉಳಿಸಿದ್ದಾರೆ. ಬೆಲ್ಲದ ನಗರದ ಹತ್ತಿರ ಇರುವ ಕೆರೆಯಲ್ಲಿ ಜಿಂಕೆ ಸಿಲುಕಿತ್ತು.
Advertisement
ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ನಂತರ ಪ್ರಾಣಿ ರಕ್ಷಕ ಸೋಮಶೇಖರ್ ಅವರ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಒಳಗೆ ಸಿಲುಕ್ಕಿದ್ದ ಹಿನ್ನೆಲೆ ಅಗ್ನಿಶಾಮಕ ಧಳ ಅಧಿಕಾರಿಗಳಿಗೆ ಕರೆ ಕೊಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಜಿಂಕೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿ ಅಧಿಕಾರಿಗಳು, ಕಾಡಿಗೆ ಬಿಟ್ಟಿದ್ದಾರೆ.