ಹತ್ಯೆ ಆರೋಪಿಗೆ ಕಠಿಣಶಿಕ್ಷೆ ವಿಧಿಸಲು ಆಗ್ರಹ

0
Anjali of Veerapur Oni, Hubli
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿಯನ್ನು ಹತ್ಯೆಗೈದಿರುವ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಗದಗ ಜಿಲ್ಲಾ ಅಂಬಿಗರ ಸಮಾಜ ಬಾಂಧವರು ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಅಮಾನುಷ ಕೃತ್ಯದಿಂದ ಇಡೀ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ. ಅಲ್ಲದೆ, ಅಂಜಲಿಯೇ ತನ್ನ ಕುಟುಂಬವನ್ನು ನಡೆಸುತ್ತಿದ್ದಳು. ಅವಳ ಹತ್ಯೆಯಿಂದ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಆರೋಪಿಯನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು, ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಅಮಿತ್ ಪೂಜಾರ್, ಗುರಪ್ಪ ತಿರ್ಲಾಪುರ್, ಬಸವರಾಜ್ ಗುಡಿಸಾಗರ, ಮಹದೇವ ಬಾಣದ್, ಮಂಜು ಅಂಬಿಗೇರ, ಹರೀಶ್ ಬಾರಕೇರ್, ರಮೇಶ್ ಬೆಣಕಲ್, ಬೆಣಕಲ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here