ಬೆಂಗಳೂರು:- ಅನ್ನಭಾಗ್ಯದ ಹಣವನ್ನು ಇದುವರೆಗೂ ಪಡೆಯದೇ ಇದ್ದವರಿಗೆ ಈ ಡಿಸೆಂಬರ್ ತಿಂಗಳಿಂದ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡಲಿದೆ. ಇದುವರೆಗೆ ಪಡಿತರವನ್ನು ಸಮರ್ಪಕವಾಗಿ ಪಡೆದರೂ ಅನ್ನಭಾಗ್ಯ ಯೋಜನೆಯಡಿ ಬಾಕಿ 5 ಕೆಜಿ ಅಕ್ಕಿ ಸಿಗದೇ ಇದ್ದ ಕುಟುಂಬಕ್ಕೆ ಈ ಡಿಸೆಂಬರ್ ತಿಂಗಳಿಂದ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮನೆ ಯಜಮಾನಿ ಖಾತೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಹಣ ಹಾಕಲು ಆಗಿರುವುದಿಲ್ಲ.
ಹೀಗಾಗಿ ಅವರ ತರುವಾಯ ಸೀನಿಯರ್ ಇರುವವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಬಾಕಿ ಇರುವವರಿಗೂ ಹಣ ಜಮೆ ಆಗಲಿದೆ. ರಾಜ್ಯದಲ್ಲಿ ಒಟ್ಟು 12774648 ಬಿಪಿಎಲ್ ಕಾರ್ಡ್‌ಗಳು ಇವೆ. ಏಳು ಲಕ್ಷಕಿಂತಲೂ (7.67 ಲಕ್ಷ) ಅಧಿಕ ಅಂತ್ಯೋದಯ ಕಾರ್ಡ್ ಇವೆ. ಯಜಮಾನಿ ಇಲ್ಲದ ಮನೆಗೆ ಕುಟುಂಬದ ಸೀನಿಯರ್‌ಗೆ ಕೊಡಲಾಗುವುದು.