ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ರವಿವರ್ಮ ಪೇಂಟರ್ಸ್ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ದರಪಟ್ಟಿ ಬಿಡುಗಡೆ ಹಾಗೂ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಚೈತನ್ಯ ಕ್ಯಾಂಟಿನ್ ಹತ್ತಿರವಿರುವ ಆ್ಯಂಗ್ಲೋ ಉರ್ದು ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮಾಬುಬಖಾನ ಜಿ. ಪಠಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು ದಿನನಿತ್ಯ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಡುವುದಲ್ಲದೇ ಸುಂದರವಾಗಿ ಬಣ್ಣ ಬಳಿದು ಸುಂದರಗೊಳಿಸುವಲ್ಲಿ ನಿರತರಾಗಿದ್ದಾರೆ. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಿ ಕಾರ್ಮಿಕರಿಗೆ ಆರೋಗ್ಯ ಮತ್ತು ಸ್ಪೂರ್ತಿ ನೀಡುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಸ್ತ ಕಟ್ಟಡ ಕಾರ್ಮಿಕರ ಸಂಘಟನೆಗಳ ಅಧೀಕ್ಷಕರು ದರಪಟ್ಟಿ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ರವಿವರ್ಮ ಪೇಂರ‍್ಸ್ ಸಂಘದ ಅಧ್ಯಕ್ಷ ಅಡಿವೆಪ್ಪ ಎಸ್.ಚಲವಾದಿ ವಹಿಸಿದ್ದರು. ಶಿವಯೋಗಿ ಪಟ್ಟಣಶೆಟ್ಟಿ, ಜಂದಿಸಾಬ ಢಾಲಾಯತ, ಚನ್ನವೀರಗೌಡ ಕೆ.ಪಾಟೀಲ, ಚಾಂದಸಾಬ ಅಬ್ಬಿಗೇರಿ, ಶೇಖಪ್ಪ ಕರಿಬಿಷ್ಠಿ, ಮೈನುದ್ದೀನ ಆದಮಭೈ, ಅಲ್ತಾಫ ಕೊಪ್ಪಳ, ಕೆ.ಬಿ. ಕುಡಗುಂಟಿ, ನೂರಅಹ್ಮದ ಬಳ್ಳಾರಿ, ಬಿ.ಎಸ್. ಹಳ್ಳಿಕೇರಿ, ಪರಶುರಾಮ ಆರ್.ಸಿಂಧೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಸುಷ್ಮಾ ಸೇರಿದಂತೆ ಗದಗ ಜಿಲ್ಲಾ ರವಿವರ್ಮ ಪೇಂಟರ್ಸ್ ಸಂಘದ ಸರ್ವ ಪದಾಧಿಕಾರಿಗಳು, ಸದಸ್ಯರು, ಮತ್ತು ಸಮಸ್ತ ಕಟ್ಟಡ ನಿರ್ಮಾಣ ಕಾರ್ಮಿಕರು ಉಪಸ್ಥಿತರಿದ್ದರು.



