ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ನಿವೃತ್ತ ನೌಕರರ ಸಂಘ ಹಾಗೂ ಹಿರಿಯರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವು ಜನೇವರಿ 12ರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ದೊಡ್ಡಯ್ಯ ಅರವಟಗಿಮಠ ತಿಳಿಸಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ನಿವೃತ್ತ ನೌಕರರ ಮತ್ತು ಹಿರಿಯರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದು, ದಶಮಾನದ ಹೊಸ್ತಿಲಿಲಲ್ಲಿರುವ ಸಂಘಕ್ಕೆ ಅನೇಕ ಅಧ್ಯಕ್ಷರುಗಳ ದೊಡ್ಡ ಕೊಡುಗೆಯಿದೆ. ಅಂದಿನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಬೇಕೆಂಬುದು ಎಲ್ಲರ ಆಸೆಯಾಗಿದೆ. ಹಾಗೆಯೆ ವಿಶೇಷ ಉಪನ್ಯಾಸಕರನ್ನಾಗಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ ಅವರನ್ನು ಆಮಂತ್ರಿಸುವ ವಿಚಾರವಿದೆ. ಅಂದಿನ ಸಮಾರಂಭದಲ್ಲಿ ಜಿಲ್ಲಾ ನಿವೃತ್ತ ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ ನಿಕಟಪೂರ್ವ ಅಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ, ನಿವೃತ್ತ ಮುಖ್ಯ ಶಿಕ್ಷಕ ಸಿ.ವಿ. ವಂಕಲಕುಂಟಿ, ನಿವೃತ್ತ ಶಿಕ್ಷಕ ಸಿ.ಎಂ. ಕುಲಕರ್ಣಿ ವಾರ್ಷಿಕೋತ್ಸವದ ಯಶಸ್ಸಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಚಂದ್ರಾಮ ಗ್ರಾಮಪುರೋಹಿತ, ಕೆ.ಕೆ. ದಾಸರ, ಎಸ್.ಆರ್. ಬಾಗಲಿ, ಎಸ್.ಬಿ. ಹೊಸಮನಿ, ಎಸ್.ಕೆ. ಪಾಟೀಲ, ಕೆ.ಎಸ್. ಕಳಕೊಣ್ಣವರ, ಎಸ್.ಬಿ. ಹಿರೇಮಠ, ಎನ್.ಎಚ್. ಚಿಕ್ಕನಗೌಡರ, ವೀರಪ್ಪ ಕುಂಬಾರ, ವಿ.ಎಸ್. ಕೊಟಗಿ, ವಿ.ಬಿ. ಹಕ್ಕಿ, ಬಿ.ಎಸ್. ಉಪ್ಪಿನ ಸೇರಿದಂತೆ ಇತರರಿದ್ದರು. ಬಿ.ಎ. ಕಲಾಲಬಂಡಿ ಸ್ವಾಗತಿಸಿದರು, ವೀರಭದ್ರಪ್ಪ ಕೆರಿಯವರ ನಿರೂಪಿಸಿದರು. ಶಿವಯೋಗಿ ಜಕ್ಕಲಿ ವಂದಿಸಿದರು.