ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ

0
Annual meeting of Shiv Sangam Souharda Co-operative Society
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್‌ಸೆಚಿಟರ್‌ನಲ್ಲಿ ಏರ್ಪಡಿಸಿದ್ದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತ್ಯನಗೌಡ ಪಾಟೀಲ, ಲೆಕ್ಕಪರಿಶೋಧಕರಾದ ಪರ್ವತಗೌಡ್ರ ಚೆಟ್ಟಿ, ಶ್ರೇಷ್ಠ ವರ್ತಕ ಬಲವಂತ ಪಾಟೀಲ, ಗೋವಿಂದರಾಜ ಗುಡಿಸಾಗರ, ನಿವೃತ್ತ ಪ್ರಾಚಾರ್ಯ ಡಾ.ಉಮೇಶ ಪುರದ, ಸುಲೋಚನಾ ನಂದಿ, ಸಮಾಜ ಸೇವಕ ಅಶೋಕ ಮಜ್ಜಿಗುಡ್ಡ, ಉತ್ತಮ ಗ್ರಾಹಕ ಬಾಳಪ್ಪ ಕವಲೂರ, ಬಸಪ್ಪ ವನಗೇರಿ, ಪ್ರಕಾಶಕರಾದ ಪ್ರಸನ್ ಶಾಬಾದಿಮಠ, ಉತ್ತಮ ಕೃಷಿಕ ಹೇಮಣ್ಣ ಬೇಲೇರಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ರತ್ನಾ ಬದಿ, ಜಿಲ್ಲಾ ಉತ್ತಮ ಶಿಕ್ಷಕಿ ಮಹಾಂತವ್ವ ಹಿರೇಮಠ, ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ ಕುಸ್ತಿಪಟು ರಮೇಶ ಭಾವಿ, ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಸಿದ್ಧಾರ್ಥ ಬಡ್ನಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸ್ಪೂರ್ತಿ ಪಾಟೀಲ, ಸುವಿಧಾ ಪಲ್ಲೇದ, ಅರುಣಕುಮಾರ ಗೋಪಾನವರ, ಸಂಗೀತ ಸಾಧಕಿ ಸಂಗೀತಾ ಭರಮಗೌಡರ, ಡ್ರಾಮಾ ಜ್ಯೂನಿಯರ್ ವಿಶ್ವ ಲಕ್ಕುಂಡಿ ಸೇರಿದಂತೆ ಹಲವು ಸಾಧಕ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿ, ಈ ಸಾಧಕ ಮಹನೀಯರು ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಸಾಧನೆ ಇತರರಿಗೆ ಮಾದರಿಯಾಗಿದ್ದು, ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವದು ನಮ್ಮ ಸಂಸ್ಥೆಗೆ ಹೆಮ್ಮೆ ಎನ್ನಿಸಿದೆ ಎಂದರು.
ವೇದಿಕೆಯ ಮೇಲೆ ಲೆಕ್ಕಪರಿಶೋಧಕರಾದ ಕೆ.ಎಸ್. ಚಟ್ಟಿ, ನಿರ್ದೆಶಕರಾದ ಮಹೇಶ ಗಾಣಿಗೇರ, ಎಮ್.ಬಿ. ಲಿಂಗದಾಳ, ಪ್ರಶಾಂತ ದೇಸಾಯಿಮಠ, ಗಿರಿಯಪ್ಪ ಗಾಣಿಗೇರ, ಕಳಕಪ್ಪ ನಾಗರಾಳ, ಸುರೇಶ ಸರ್ವಿ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ ಉಪಸ್ಥಿತರಿದ್ದರು.
ಗಾಯಕಿ ಸಂಗೀತಾ ಭರಮಗೌಡ್ರ ಪ್ರಾರ್ಥಿಸಿದರು. ಬಿ.ಎಮ್. ಹಳ್ಳಿಕೇರಿ ಸ್ವಾಗತಿಸಿದರು. ಟಿ.ವ್ಹಿ. ಸಂಶಿ, ಜಗದೀಶ ಹುಡೇದ, ಎಸ್.ಎಂ. ಸರ್ವಿ, ಬಸವರಾಜ ಹಳ್ಳಿಕೇರಿ ನಿರೂಪಿಸಿದರು. ಮಲ್ಲು ಬಡಿಗೇರ ವಂದಿಸಿದರು.
ಸಂಘದ ಅಧ್ಯಕ್ಷ ವ್ಹಿ.ಎಸ್. ಶಿವಕಾಳಿಮಠ ಮಾತನಾಡಿ, ಸಂಸ್ಥೆ ಕೇವಲ ವ್ಯವಹಾರ, ಲಾಭ-ಹಾನಿಯನ್ನು ಮಾತ್ರ ಲೆಕ್ಕಾಚಾರ ಹಾಕುವದಿಲ್ಲ. ಅದರೊಟ್ಟಿಗೆ ಸಮಾಜಮುಖಿ, ಜನಮುಖಿ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here