ಮನೋರಮಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

0
Annual sports event of Manorama Mahavidyalaya
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ ಉದ್ಘಾಟಿಸಿ, ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ, ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗುವರು. ಪ್ರತಿಯೊಬ್ಬರೂ ತಮ್ಮ ಕ್ರೀಡಾ ಪ್ರತಿಭೆಗಳನ್ನು ಪ್ರದರ್ಶಿಸಿ ಉತ್ತಮ ಕ್ರೀಡಾಪಟುವಾಗಿರಿ ಎಂದರು.

Advertisement

ಆಡಳಿತಾಧಿಕಾರಿ ಕಿಶೋರ ಮುದಗಲ್ಲ ಮಾತನಾಡಿ, ಆಟವಾಡಿಸುವ ಪ್ರತಿಯೊಬ್ಬ ದೈಹಿಕ ನಿರ್ದೇಶಕರು ವೈದೈರು ಇದ್ದಂತೆ. ಕ್ರೀಡೆ ಇಲ್ಲದ ಜೀವನ ಕೀಡೆ ಹತ್ತಿದ ಹಣ್ಣಿನಂತೆ. ಆದ್ದರಿಂದ ಎಲ್ಲರೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ. ಪ್ರಾಮಾಣಿಕತೆಯಿಂದ ಆಟ ಆಡಿ ಆನಂದಿಸಿ ಎಂದರು.

ವಯಕ್ತಿಕ ಆಟಗಳಾದ 100 ಮೀ. 200 ಮೀ 400 ಮೀ, ಓಟ ಹಾಗೂ ಗುಂಡು ಎಸೆತ, ಬಲ್ಲೆ ಎಸೆತ, ರೀಲೆ ಹಾಗೂ ಗುಂಪು ಆಟಗಳಾದ ವ್ಹಾಲಿಬಾಲ್, ಥ್ರೋಬಾಲ, ಕಬಡ್ಡಿ, ಕ್ರೀಕೆಟ್ ಆಟಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ದೈಹಿಕ ನಿರ್ದೇಶಕ ಖಯುಮ ನವಲೂರ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು. ನಿರ್ಣಾಯಕರಾಗಿ ಥಾಮಸ್ ಹಾಗೂ ರಾಘು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಯೋಜಕರುಗಳಾದ ಪ್ರೊ. ಸವಿತಾ ಪೂಜಾರ, ಪ್ರೊ. ಅಲ್ವಿನಾ ಡಿ., ಪ್ರೊ. ಚೈತ್ರಾ ಡಿ., ಪ್ರೊ. ಶಾಹಿದಾ ಶಿರಹಟ್ಟಿ, ಪ್ರೊ. ಸಂಗಮೇಶ ಹಾದಿಮನಿ, ಪ್ರೊ. ಕಿರಣ ಎಂ., ಪ್ರೊ. ಕುಸುಮ ಎಂ, ಪ್ರೊ. ಆರತಿ ಜಿ, ಗ್ರಂಥಪಾಲಕರಾದ ಹರೀಶ ಬಾರಕೇರ. ಆಫೀಸ ಸುಪ್ರೀಡೆಂಟ ಉಮಾ ದಿನ್ನಿ, ಕುಶಾಲ ಎಂ, ಕ್ರೀಡಾ ವಿದ್ಯಾರ್ಥಿ ಪ್ರತಿನಿಧಿಗಳಾದ ಮುಸ್ತಫಾ, ಅರುಣ, ಶ್ರೀನಿವಾಸ ರೆಡ್ಡಿ, ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈಷ್ಣವಿ ಭಾಂಡಗೆ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here