ಬಡ ವಿದ್ಯಾರ್ಥಿಗೆ ವಾರ್ಷಿಕ ಕಲಿಕಾ ಶುಲ್ಕದ ನೆರವು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗೆ ಗದಗ ಅಲ್ಪಸಂಖ್ಯಾತರ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಶಾಲೆಯ ವಾರ್ಷಿಕ ಕಲಿಕಾ ಶುಲ್ಕ ನೀಡಿ ಸಹಾಯ ಮಾಡಿದರು.

Advertisement

ಶ್ರೀ ಮಹಾವೀರ ಜೈನ್ ಪ್ರೈಮರಿ ಹಾಗೂ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮಹಮದ ಪುರಕಾನ ಸೈಯದ್ ಇವನ ವಾರ್ಷಿಕ ಕಲಿಕಾ ಶುಲ್ಕ 8,154 ರೂಪಾಯಿಗಳನ್ನು ಅಲ್ಪಸಂಖ್ಯಾತ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟಿನ ವತಿಯಿಂದ ಟ್ರಸ್ಟಿನ ಅಧ್ಯಕ್ಷರಾದ ಎಂ.ಸಿ. ಶೇಖ್ ಅವರು ಶಾಲೆಯ ಮುಖ್ಯೋಪಾಧ್ಯಾಯರಾದ ಧರ್ಮಸಿ ಇವರ ಸಮ್ಮುಖದಲ್ಲಿ ಹಣ ಪಾವತಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಅರುಣ ಕುಮಾರ್ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here