ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಡಾ. ಜಾಕೀರ ಹುಸೇನ ಕಾಲೋನಿ ಮುಸ್ಲಿಂ ಜಮಾತ ವತಿಯಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯ ಶಾಲೆಯ ವಾರ್ಷಿಕ ಕಲಿಕಾ ಶುಲ್ಕ ನೀಡಿ ಸಹಾಯ ಮಾಡಿದರು.
Advertisement
ಗದಗ ಶಹರದ ರಾಜೀವ ಗಾಂಧಿ ವಿಶ್ವವಿದ್ಯಾಲಯದಲ್ಲಿ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಾನಿಯಾ ಕಲೆಗಾರ್ ಇವಳ ವಾರ್ಷಿಕ ಕಲಿಕಾ ಶುಲ್ಕ 10 ಸಾವಿರ ರೂಪಾಯಿಗಳನ್ನು ಜಾಕೀರ ಹುಸೇನ ಕಾಲೋನಿ ಮುಸ್ಲಿಂ ಜಮಾತಿನ ವತಿಯಿಂದ ಜಮಾತಿನ ಅಧ್ಯಕ್ಷರಾದ ಎಸ್.ಎ. ಟೋಪಿವಾಲೆ, ಕಾರ್ಯದರ್ಶಿ ಮೌಲಾಸಾಬ್ ಸಿ.ಶೇಖ್, ಎಂ.ಎಲ್. ಗುಳೇದಗುಡ್ಡ, ಶಬ್ಬೀರ್ ಶಿರಹಟ್ಟಿ ಇವರು ವಿದ್ಯಾರ್ಥಿನಿಯ ಈ ವರ್ಷದ ಕಲಿಕಾ ಶುಲ್ಕದ ಚೆಕ್‌ನ್ನು ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಹಾಗೂ ಪಾಲಕರು ಉಪಸ್ಥಿತರಿದ್ದರು.