ಖ್ಯಾತ ನಟ ಶೈನ್ ಟಾಮ್ ಚಾಕೊ ವಿರುದ್ಧ ಆರೋಪ ಮಾಡಿದ ಮತ್ತೋರ್ವ ನಟಿ

0
Spread the love

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್‌ ಟಾಮ್‌ ಚಾಕೋ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಸೆಟ್‌ ನಲ್ಲಿ ಶೈನ್‌ ಟಾಮ್‌ ಚಾಕೋ ಡ್ರಗ್ಸ್‌ ಸೇವನೆ ಮಾಡುತ್ತಾರೆ. ಹಾಗೂ ನಟಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ಅದರ ಬೆನ್ನಲ್ಲೆ ನಟನನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಮಲಯಾಳಂ ಸಿನಿಮಾ ಸಂಘದ ಸಭೆಯಲ್ಲಿ ಶೈನ್ ಟಾಮ್ ಚಾಕೊ ಬಹಿರಂಗ ಕ್ಷಮೆ ಕೇಳಿದ್ದಾರೆ. ಇಗೀಗ ಶೈನ್‌ ವಿರುದ್ಧ ಮತ್ತೋರ್ವ ನಟಿ ಅಪರ್ಣಾ ಜಾನ್‌ ಆರೋಪ ಮಾಡಿದ್ದಾರೆ.

Advertisement

ಇತ್ತೀಚೆಗೆ ನಟನ ವಿರುದ್ಧ ದೂರು ನೀಡಿರುವ ನಟಿ ವಿನ್ಸಿ ಅಲೋಷಿಯಸ್ ಅವರು ಹೇಳಿರುವ ಮಾತುಗಳನ್ನು ಅನುಮೋದಿಸಿರುವ ನಟಿ ಅಪರ್ಣಾ ಜಾನ್, ಟಾಮ್ ಚಾಕೊ ಮಾತುಗಳು ‘ಬಾಯಿ ಭೇದಿ’ಯ ಹಾಗಿರುತ್ತವೆ ಎಂದಿದ್ದಾರೆ.

‘ಸೆಟ್​ನಲ್ಲಿ ಶೈನ್ ಟಾಮ್ ಚಾಕೊ ಅವರ ಎನರ್ಜಿ ಅಸಾಧ್ಯವಾದುದು, ಅವರು ಬಹಳ ಒಳ್ಳೆಯ ನಟ. ಅತ್ತಿಂದಿತ್ತ ಓಡಾಡುತ್ತಲೇ ಇರುತ್ತಾರೆ ಎಲ್ಲರನ್ನೂ ಮಾತನಾಡಿಸುತ್ತಾ ಇರುತ್ತಾರೆ. ಅವರು ಆಡುವ ಬಹುತೇಕ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಅದರಲ್ಲೂ ನಟಿಯರ ಬಳಿಯಂತೂ ಸಂಯಮ ಇಲ್ಲದೆ ಮಾತನಾಡುತ್ತಾರೆ. ನಟಿಯರ ಜೊತೆಗೆ ಅವರು ಆಡುವ ಮಾತುಗಳು ಬಹುತೇಕ ಲೈಂಗಿಕತೆಗೆ, ಮಹಿಳೆಯರ ದೇಹಕ್ಕೆ ಸಂಬಂಧಿಸುದುವೇ ಆಗಿರುತ್ತವೆ. ನಟಿ ವಿನ್ಸಿ ಅಲೋಷಿಯಸ್ ಗೆ ಆಗಿರುವ ಕೆಟ್ಟ ಅನುಭವ ನನಗೂ ಆಗಿದೆ’ ಎಂದಿದ್ದಾರೆ ನಟಿ ಅಪರ್ಣಾ ಜಾನ್.

ಆ ಸಮಯದಲ್ಲಿ ನಾನು ಕಲಾವಿದರ ಸಂಘಕ್ಕೆ ದೂರು ನೀಡಿದ್ದೆ. ಅವರು ನನ್ನ ದೂರಿಗೆ ಬಲು ಬೇಗ ಸ್ಪಂದಿಸಿದರು. ಸಿನಿಮಾದವರು ನನ್ನ ಭಾಗದ ಚಿತ್ರೀಕರಣವನ್ನು ಬಲು ಬೇಗನೆ ಮುಗಿಸಿದರು. ಅಲ್ಲದೆ ಶೈನ್ ಟಾಮ್ ಚಾಕೊ ಇಂದ ನನ್ನನ್ನು ದೂರ ಇಟ್ಟರು. ಸೆಟ್​ನಲ್ಲಿ ನಾನು ಸುರಕ್ಷಿತ ಭಾವ ಅನುಭವಿಸುವಂತೆ ಮಾಡಿದರು’ ಎಂದು ಅಪರ್ಣಾ ಜಾನ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here