ಗದಗ:- ಇತ್ತೀಚೆಗೆ ತುಂಗಭದ್ರಾ ನದಿಯಲ್ಲಿ ಹೆಚ್ಚಾಗಿ ಶವಗಳು ತೇಲಿ ಬರುತ್ತಿದ್ದು, ಇಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.
ಇಂದು ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿ ಮತ್ತೊಂದು ಅನಾಮಧೇಯ ಶವ ತೇಲಿ ಬಂದಿದೆ. ತುಂಗಭದ್ರಾ ನದಿಯಲ್ಲಿ ಪದೇ ಪದೇ ಹೆಣಗಳು ತೇಲಿ ಬರುತ್ತಿದ್ದು, ಇಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ನವೆಂಬರ್ 5 ರಂದು ಮೂರು ಮಕ್ಕಳ ನದಿಗೆ ಎಸೆದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಶವ ಪತ್ತೆಯಾಗಿದೆ.
ಇನ್ನೂ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಅನುಮಾನ ಪೊಲೀಸರಿಗೆ ಶುರುವಾಗಿದೆ. ಸುಮಾರು 40 ವರ್ಷದ ವ್ಯಕ್ತಿಯ ಶವ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶಂಕರ್‌ರಾವ್ ಟೇಲರ್, ಮುಂಡರಗಿ ಅಂತ ಲೇಬಲ್ ಇರೋ ಶರ್ಟ್ ಹಾಕಿರುವುದು ಪೊಲೀಸರಿಂದ ತಿಳಿದು ಬಂದಿದೆ.
ಕೂಡಲೇ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.