ಬೆಂಗಳೂರು : ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ ಮಾಡಿ ಜೈಲು ಸೇರಿರುವ ಐಶ್ವರ್ಯ ಗೌಡ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಡಾ.ಮಂಜುಳಾ ಪಾಟೀಲ್ ಎನ್ನುವವರನ್ನು ತಾನು ಡಿಕೆ ಸುರೇಶ್ ತಂಗಿ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಅವರಿಂದ 2,52,60,000ಹಣ 2 ಕೆಜಿ 350 ಗ್ರಾಂ ಚಿನ್ನಾಭರಣ ಸೇರಿ ಒಟ್ಟು ಐದು ಕೋಟಿ ರೂ.ನಷ್ಟು ಐಶ್ವರ್ಯ ಗೌಡ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದ ಐಶ್ವರ್ಯ, ನಾನು ಡಿಕೆ ಸುರೇಶ್ ತಂಗಿ ಎಂದು ವೈದ್ಯರಿಗೆ ಪರಿಚಯ ಮಾಡಿಕೊಂಡಿದ್ದಾಳೆ. ಗೊಲ್ಡ್ ಬ್ಯಸಿನೆಸ್ ,ಕೆಸಿನೋ, ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ. ಬ್ಯುಸಿನೆಸ್ ಮೇಲೆ ಹೂಡಿಕೆ ಮಾಡಿ ಎಂದು 5ಕೋಟಿಯಷ್ಟ ಹಣ ಪೀಕಿದ್ದಾಳೆ.
2022 ರಿಂದ ಇಲ್ಲಿವರೆಗೂ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿದ್ದಾಳೆ ಎಂದು ವೈದ್ಯರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ಹಾಗು ಇಬ್ಬರು ಡ್ರೈವರ್‌ಗಳಾದ ಅಶ್ವಥ್ ಗೌಡ ಹಾಗೂ ಧನಂಜಯ್ಯನ ವಿರುದ್ಧ ಎಫ್‌ಐಆಆರ್ ದಾಖಲಾಗಿದೆ.