ಬೆಂಗಳೂರು:- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 1,632 ಪುಟಗಳ ದೂಷಾರೋಪ ಪಟ್ಟಿಯನ್ನು 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್‌ಐಟಿ ಇಂದು ಸಲ್ಲಿಸಿದೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಪ್ರಕರಣದಲ್ಲಿ 113 ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಟ್ಟು 1,632 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಈ ಆರೋಪ ಪಟ್ಟಿಯಲ್ಲಿ ಏನೆಲ್ಲಾ ಮಾಹಿತಿ ಇದೆ ಅನ್ನೋದು ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಈವರೆಗೆ ನಡೆಸಿದ ತನಿಖೆಯಲ್ಲಿ ಸಂತ್ರಸ್ತ ಮಹಿಳೆಯ ಹೇಳಿಕೆ, ಸಾಂದರ್ಭಿಕ ಸಾಕ್ಷಿ ಮತ್ತು ಸಂತ್ರಸ್ತೆಯ ಅಶ್ಲೀಲ ವೀಡಿಯೋ ಕ್ಲಿಪ್‌ಗಳು, ಎಫ್‌ಎಸ್‌ಎಲ್ ವರದಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರ ಆಧಾರದ ಮೇಲೆ ಕಲಂ 376(2)(K), 376(2)(N), 354(A), 354(B), 354(C), 506, 201 ಐಪಿಸಿ ಮತ್ತು ಕಲಂ 66(E), ಐಟಿ ಆಕ್ಟ್-2008 ರೀತ್ಯಾ ಅಪರಾಧ ಎಸಗಿರುವುದು ದೃಢಪಟ್ಟಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಕೆ.ಆರ್‌ನಗರ ತಾಲೂಕಿನ 48 ವರ್ಷದ ಸಂತ್ರಸ್ತೆ ತನ್ನ ಪತಿಯೊಂದಿಗೆ ಗನ್ನಿಕಡ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇವರಿಬ್ಬರು ಅದೇ ತೋಟದಲ್ಲಿ ಕಾರ್ಮಿಕರ ವಾಸ್ತವ್ಯಕ್ಕೆ ನಿರ್ಮಿಸಲ್ಪಟ್ಟ ಮನೆಯಲ್ಲೇ ವಾಸಮಾಡಿಕೊಂಡಿದ್ದರು.
ಈ ವೇಳೆ ಹೊಳೆನರಸಿಪುರ ಟೌನ್‌ನಲ್ಲಿರುವ ಚೆನ್ನಾಂಬಿಕ ನಿಲಯದ ಮನೆಯಲ್ಲಿ ವಾಸಿಸುತ್ತಿದ್ದ ಪ್ರಜ್ವಲ್ ರೇವಣ್ಣ ಸಹ ಆಗಾಗ್ಗೆ ಗನ್ನಿಕಡ ತೋಟಕ್ಕೆ ಬಂದು ಹೋಗುತ್ತಿದ್ದರು.
2021ರಲ್ಲಿ ಕೋವಿಡ್ ಲಾಕ್‌ಡೌನ್‌ಗೂ ಮುನ್ನ ಒಮ್ಮೆ ಗನ್ನಿಕಡ ತೋಟಕ್ಕೆ ಪ್ರಜ್ವಲ್ ರೇವಣ್ಣ ಹೋಗಿದ್ದರು. ಇದೇ ವೇಳೆ ಸಂತ್ರಸ್ತೆ ತೋಟದ ಮನೆಯಲ್ಲಿ ಒಂದನೇ ಮಹಡಿಯಲ್ಲಿನ ರೂಮ್ ಕ್ಲೀನ್ ಮಾಡುತ್ತಿದ್ದಾಗ ಅವರ ಬಳಿ ಆರೋಪಿ ಹೋಗಿದ್ದಾನೆ. ಕುಡಿಯೋಗೆ ಒಂದು ಚೊಂಬು ನೀರು ತಗೊಂಡು ಬಾ ಅಂತ ಹೇಳಿದ್ದಾನೆ. ಸಂತ್ರಸ್ತೆ ಕುಡಿಯಲು ನೀರು ಕೊಡಲು ರೂಮ್‌ಗೆ ಹೋದಾಗ ತಕ್ಷಣ ಬಾಗಿಲು ಹಾಕಿದ್ದಾನೆ.
ಈ ವೇಳೆ ಬಾಗಿಲು ತೆಗೆಯಣ್ಣ ಭಯವಾಗುತ್ತಿದೆ, ದಮ್ಮಯ್ಯ ಬಿಟ್ಟುಬಿಡಣ್ಣ ಅಂತ ಅಂಗಲಾಚಿದ್ದಾಳೆ. ಆದರೂ ಬಿಡದ ಆರೋಪಿ ಆಕೆಯನ್ನ ಬೆತ್ತಲೆಗೊಳಿಸಿ ಅತ್ಯಾಚಾರ ಮಾಡಿದ್ದಾನೆ. ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಬೆಂಗಳೂರಿನ ಬಸವನಗುಡಿ ನಿವಾಸದಲ್ಲೂ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.