ಗದಗ:- ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ದಸರಾ ವಾರ್ಷಿಕ ವಾದ್ಯಮೇಳ ಆಯೋಜನೆ ಮಾಡಲಾಗಿತ್ತು.

ವಿಶ್ವ ವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದೇ ಹೊತ್ತಲ್ಲಿ ಪ್ರತೀ ವರ್ಷ ನಡೆಯುವ ದಸರಾ ವಾರ್ಷಿಕ ವಾದ್ಯಮೇಳ ಕಾರ್ಯಕ್ರಮ ಜನರನ್ನು ಹೆಚ್ಚು ಗಮನ ಸೆಳೆಯುತ್ತದೆ.
ಅದರಂತೆ ಈ ಬಾರಿ ಮೈಸೂರು ಅರಮನೆ ಆವರಣದಲ್ಲಿ ಸೆಪ್ಟೆಂಬರ್ 26ರ ಶುಕ್ರವಾರ ದಸರಾ ವಾರ್ಷಿಕ ವಾದ್ಯಮೇಳ ನಡೆದಿದ್ದು, ಇದರಲ್ಲಿ ಒಟ್ಟು 28 ತಂಡಗಳು ಭಾಗಿಯಾಗಿದ್ದವು. ಇದರಲ್ಲಿ ಲಯಬದ್ಧವಾಗಿ ನುಡಿಸಿದ ಗದಗದ ಪೊಲೀಸ್ ಬ್ಯಾಂಡ್ ಟೀಮ್ ಗೆ ಎರಡನೇ ಪ್ರಶಸ್ತಿ ಲಭಿಸಿದೆ. ಗದಗ ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಎಆರ್‌ಎಸ್ ಐ ಬಿ. ಬಿ. ನಿಡಗುಂದಿ ನೇತೃತ್ವದ ತಂಡ ಈ ದಸರಾ ವಾರ್ಷಿಕ ವಾದ್ಯಮೇಳದಲ್ಲಿ ಪ್ರಶಸ್ತಿ ಗೆದ್ದು ಕೊಂಡಿದೆ. ಈ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪ್ರಶಸ್ತಿ ಪಡೆದ ಗದಗ ಪೊಲೀಸರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕಾರ್ಯಕ್ರಮದಲ್ಲಿ ಮೊದಲ ಪ್ರಶಸ್ತಿ ಕಾರವಾರ ಪೊಲೀಸ್ ತಂಡಕ್ಕೆ ಲಭಿಸಿದೆ. ದಸರಾ ವಾರ್ಷಿಕ ವಾದ್ಯಮೇಳದಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.



