ಬೀದರ್: ಬೃಹತ್ ಗಾತ್ರದ ಆಲದ ಮರ ಹೊತ್ತಿ ಉರಿದಿರುವ ಘಟನೆ ಬೀದರ್ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ನಡೆದಿದೆ. ಯಾರೋ ಕಿಡಿಗೇಡಿಗಳು ಬೃಹತ್ ಆಲದ ಮರಕ್ಕೆ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದ್ದು,
Advertisement
ನೂರಾರು ವರ್ಷದ ಬೃಹತ್ ಆಲದ ಮರ ಧಗ ಧಗನೆ ಹೊತ್ತಿ ಉರಿಯುವುದನ್ನ ಕಂಡ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.ಈ ಘಟನೆಯು ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.