ಕಲಬುರಗಿ: ದಿನದಿಂದ ದಿನಕ್ಕೆ ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ. ಇದೀಗ ಕೈದಿಗಳ ಹೈಫೈ ಜೀವನ ಶೈಲಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜೈಲಿನೊಳಗೆ ಕ್ಲಬ್‌ಗಳನ್ನು ಮೀರಿಸುವಂತ ಬಿಂದಾಸ್ ಲೈಫ್ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಡಿಯೋದಲ್ಲಿ ಕೈದಿಗಳು ಬ್ರ್ಯಾಂಡೆಡ್ ಎಣ್ಣೆ ಸೇವಿಸುತ್ತಾ, ಸಿಗರೇಟ್ ಸೇದುತ್ತಾ, ಗುಂಪು ಗುಂಪಾಗಿ ಜೂಜಾಟ ಆಡುತ್ತಿರುವ ದೃಶ್ಯಗಳು ಕಾಣಿಸಿವೆ. ಬಿಗಿ ಭದ್ರತೆಯ ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ತಲುಪುತ್ತಿವೆ ಎಂಬ ಪ್ರಶ್ನೆ ಮೂಡಿದೆ.
ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಕಣ್ಮುಚ್ಚಿ ಕುಳಿತಿದ್ದಾರೆ. ನಿನ್ನೆಯಷ್ಟೇ ಆರ್.ಡಿ. ಪಾಟೀಲ್ ವಿಡಿಯೋ ವೈರಲ್ ಆಗಿದ್ದು, ಜೈಲ್ ಅಧಿಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ರೂ. ಲಂಚದ ಆರೋಪವನ್ನು ಮಾಡಿದ್ದರು. ಇದೀಗ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ಅಂದರ್–ಬಾಹರ್ ಅಟ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.



