ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಜಾಮೀನು ಅರ್ಜಿ ವಜಾ ಆದ ಬೆನ್ನಲ್ಲೇ ರನ್ಯಾಳಿಂದ ವಿಚ್ಛೇದನ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಲು ರನ್ಯಾ ಪತಿ ಜತಿನ್ ಹುಕ್ಕೇರಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ರನ್ಯಾ ಹಾಗೂ ಜತಿನ್ ಹುಕ್ಕೇರಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಲೆ ಇದೆ. ಹೀಗಾಗಿ ಸದ್ಯ ರನ್ಯಾಳಿಂದ ಅಂತರ ಕಾಯ್ದುಕೊಂಡಿರುವ ಜತಿನ್ ಇದೀಗ ಡಿವೋರ್ಸ್ ಗೆ ಮುಂದಾಗಿದ್ದಾರೆ.
2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ರನ್ಯಾ, ಜತಿನ್ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ನಡೆದಿದ್ದು, ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ ಮೆಂಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ರನ್ಯಾ ಹಾಗೂ ಜತಿನ್ ನಡುವೆ ಮದುವೆಯಾದ ಒಂದೇ ತಿಂಗಳಲ್ಲಿ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರು ಸಂಧಾನಕ್ಕೆ ಪದೇ ಪದೇ ಯತ್ನಿಸಿದರೂ ಸಂಬಂಧ ಸರಿಹೋಗಿರಲಿಲ್ಲ. ಹೀಗಾಗಿ ಇದೀಗ ಜತಿನ್ ಡಿವೋರ್ಸ್ ಗೆ ಮುಂದಾಗಿದ್ದಾರೆ.
ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್‌ಗೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳವಾಗಿದೆ. ಈ ಜಗಳ ಡಿವೋರ್ಸ್ ಹಂತಕ್ಕೂ ತಲುಪಿತ್ತು. ಗಂಡನ ಜೊತೆ ಜಗಳವಾಡಿದರೂ ಕ್ಯಾರೆ ಎನ್ನದ ರನ್ಯಾ, ತನ್ನ ಫ್ರೆಂಡ್ ಆಗಿದ್ದ ತರುಣ್ ಜೊತೆ ಸೇರಿ ಚಿನ್ನಾ ಸಾಗಾಟಕ್ಕೆ ಇಳಿದಿದ್ದರು. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.