‘ಅನಾವರಣ’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ… ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ಜೋಡಿಯ ಗಾನಬಜಾನ

0
Spread the love

ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ಅನಾವರಣ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

Advertisement

ಈ ಹಿಂದೆ ಬಿಡುಗಡೆಯಾಗಿದ್ದ ಏನಾಗಿದೆ ಎಂಬ ಪ್ರೇಮಗೀತೆಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅನಾವರಣ ಸಿನಿಮಾದ ರೀ ದೇವರೇ ಎಂಬ ಮತ್ತೊಂದು ಗಾನಬಜಾನ ಬಿಡುಗಡೆಯಾಗಿದೆ.

ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠ ಕುಣಿಸಿದ್ದಾರೆ.ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ರೀ ದೇವರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ.. ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

ವೆಂಕಿ UDV ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ.

ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ವಿಜಯ್ ಸಿನಿಮಾಸ್ ಬಿಡುಗಡೆ ಮಾಡಲಿದ್ದಾರೆ.

ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಂತೂ ಬಹಳಷ್ಟು ಹೆಸರು ಮಾಡಿದರು. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಅದ್ಭುತಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿ ತಮ್ಮ ಅಭಿನಯ ಶಕ್ತಿಯನ್ನು ತೋರಿಸಿದರು.

ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಚೆನ್ನಾಗಿ ಹೆಸರು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here