ಕಳೆದ ಮೂರು ವರ್ಷಗಳ ಹಿಂದಷ್ಟೇ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ ಹಾಗೂ ಉದ್ಯಮಿ ಸೊಹೈಲ್ ಖತುರಿಯಾ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂದು ಸುದ್ದಿ ಕೇಳಿ ಬಂದಿದೆ. ಇಬ್ಬರ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದ್ದು ಸದ್ಯ ಹನ್ಸಿಕಾ ಪತಿಯಿಂದ ದೂರವಾಗಿ ಒಬ್ಬರೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಸೊಹೈಲ್ ಪ್ರತಿಕ್ರಿಯೆ ನೀಡಿದ್ದು ಹನ್ಸಿಕಾ ಯಾವುದೇ ಮಾಹಿತಿ ನೀಡಿಲ್ಲ.
ಇತ್ತೀಚೆಗೆ ನಟ, ನಟಿಯರು ಇಬ್ಬರ ಮೇಲೊಬ್ಬರಂತೆ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ. ಆ ಸಾಲಿಗೆ ಇದೀಗ ಹನ್ಸಿಕಾ ಕೂಡ ಸೇರ್ಪಡೆಗೊಂಡಿದ್ದಾರೆ. ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಹನ್ಸಿಕಾ ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಟನೆಯ ಬಿಂದಾಸ್ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತವಾಗಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗ್ಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿಯ ದಾಂಪತ್ಯ ಬದುಕು ಮೂರೇ ವರ್ಷಕ್ಕೆ ಅಂತ್ಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಹನ್ಸಿಕಾ ತಮ್ಮ ಮೊದಲ ಆನಿವರ್ಸರಿ ಫೋಟೊಗಳನ್ನು ಬಿಟ್ಟರೆ ಪತಿಯ ಜತೆಗೆ ಇರೋ ಯಾವ ಚಿತ್ರವನ್ನು ಹಂಚಿಕೊಂಡಿಲ್ಲ.
ಇನ್ನೂ ಈ ಬಗ್ಗೆ ಸೊಹೈಲ್ ಸ್ಪಷ್ಟನೆ ನೀಡಿದ್ದು, ‘ಇದು ಸತ್ಯ ಅಲ್ಲ’ ಎಂದಿದ್ದಾರೆ. ಡಿಸೆಂಬರ್ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಮುಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಸ್ನೇಹಿತೆ ಪತಿಯನ್ನೇ ಹನ್ಸಿಕಾ ಪ್ರೀತಿಸಿ ಮದುವೆಯಾಗಿದ್ದರು.



