ದೇವನಹಳ್ಳಿ;- ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೋಲೆರೋ ವಾಹನ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ರಘುಮೇನಹಳ್ಳಿ ನರಸೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾ.ಜಿಲ್ಲೆ ದೇವನಹಳ್ಳಿ ತಾಲ್ಲೂಕು ಚಪ್ಪರಕಲ್ಲು ಬಳಿ ಅಪಘಾತ ಸಂಭವಿಸಿದೆ.
ಘಟನೆ ಪರಿಣಾಮ ಬೋಲೆರೋ ವಾಹನ ನಜ್ಜುಗುಜ್ಜಾಗಿದ್ದು, ಚಾಲಕನ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಲಘುಮೇನಹಳ್ಳಿಯ ನರಸೇಗೌಡ ಮೃತ ದುರ್ದೈವಿ. ಕೂದಲೆಳೆ ಅಂತರದಲ್ಲಿ ಪಾರಾಗಿರೊ ಬುಲೆರೋ ಚಾಲಕನ ಪಕ್ಕದಲ್ಲಿದ್ದ ವ್ಯಕ್ತಿ. ನೆನ್ನೆಯಷ್ಟೆ ಚಿಕ್ಕಬಳ್ಳಾಪುರದ ಹೆದ್ದಾರಿಯಲ್ಲಿ ಭೀಕರ ಅಪಘಾತದಲ್ಲಿ 13 ಜನರ ಸಾವಾಗಿತ್ತು. ಈ ದುರಂತ ಮಾಸುವ ಮುನ್ನವೇ ನಿಂತಿದ್ದ ಲಾರಿಗೆ ಬೋಲೆರೊ ಡಿಕ್ಕಿ ಹೊಡೆದಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಎಲ್ಲೆಂದರಲ್ಲಿ ವಾಹನ ಕೆಟ್ಟು ನಿಲ್ಲುತ್ತಿದ್ದು, ಈ ರೀತಿಯ ವಾಹನಗಳಿಂದ ಅಪಘಾತ ಹೆಚ್ಚುತ್ತಿದೆ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ.