ವಿಜಯನಗರ:- ಹೆರಿಗೆಯಾಗಿ 6 ದಿನದ ಬಳಿಕ ಪುಟ್ಟ ಕಂದಮ್ಮನ ಬಿಟ್ಟು ಬಾಣಂತಿ ಓರ್ವರು ಸಾವನ್ನಪ್ಪಿದ ಘಟನೆ ಹೊಸಪೇಟೆಯಲ್ಲಿ ಜರುಗಿದೆ. 20 ವರ್ಷದ ಐಶ್ವರ್ಯಾ ಮೃತ ಬಾಣಂತಿ.
Advertisement
ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಶ್ವರ್ಯಾಗೆ ಕಳೆದ ಡಿಸೆಂಬರ್ 20ರಂದು ಹೊಸಪೇಟೆಯ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬಾಣಂತಿ ಐಶ್ವರ್ಯಾ ಅವರ ದುರಂತಕ್ಕೆ ಫುಡ್ ಪಾಯ್ಸನ್ ಕಾರಣ ಎನ್ನಲಾಗಿದೆ. ಹೆರಿಗೆಯಾದ ಎರಡು ದಿನಗಳ ಬಳಿಕ ಮೃತ ಬಾಣಂತಿ ಇಡ್ಲಿ ತಿಂದಿದ್ದರಂತೆ. ಇಡ್ಲಿ ತಿಂದ ಮೇಲೆ ಐಶ್ವರ್ಯಾ ಅವರು ವಾಂತಿ ಬೇಧಿಯಿಂದ ಬಳಲಿದ್ದಾರೆ.
ಐಶ್ವರ್ಯಾ ಸಾವಿಗೆ ಹೊರಗಿನಿಂದ ತಂದ ಇಡ್ಲಿ ತಿಂದಿದ್ದೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.