ಮಂಡ್ಯ: ಸಕ್ಕರೆನಾಡಲ್ಲಿ ಮತ್ತೊಂದು ನಾಲೆ ದುರಂತ ಸಂಭವಿಸಿದೆ. ವಿ.ಸಿ ನಾಲೆಗೆ ನಾಲ್ವರು ಪ್ರಯಾಣಿಕರಿದ್ದ ಕಾರೊಂದು ಉರುಳಿ ಬಿದ್ದು ಮೂವರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಮಾಚಹಳ್ಳಿ ಬಳಿ ನಡೆದಿದೆ.
Advertisement
ಮಂಡ್ಯ ನಗರದ ಹಾಲಹಳ್ಳಿ ಫಯಾಜ್ ಅಲಿಯಾಸ್ ಬ್ಯಾಟರಿ, ಆಯಾಜ್, ಖಾಜು ಮೃತರು.
ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ನಯಾಜ್ ನಾಲೆ ನೀರಿನಲ್ಲಿ ಈಜಿಕೊಂಡು ಪಾರಾಗಿದ್ದಾನೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು,
ನಾಪತ್ತೆಯಾದ ಇಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.