ಮಂಡ್ಯ: ಮಂಡ್ಯದ ವಿಸಿ ನಾಲೆ ಬಳಿ ಮತ್ತೊಂದು ದುರಂತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿಗೆ ನಾಲೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದ ಘಟನೆ ನಿನ್ನೆ ನಡೆದಿತ್ತು. ಓರ್ವನನ್ನು ರಕ್ಷಿಸಲಾಗಿದ್ದು ಮತ್ತೋರ್ವ ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಪೀರ್‌ಖಾನ್ ಶವ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ ಪತ್ತೆಯಾಗಿದೆ.
ಕತ್ತಲಾದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಶೋಧ ಕಾರ್ಯ ನಿಲ್ಲಿಸಿದರು ಸಹ ಕುಟುಂಬಸ್ಥರು, ಸ್ನೇಹಿತರು ಸೇರಿ ತಡರಾತ್ರಿವರೆಗೂ ಫೀರ್ ಖಾನ್ ಮತ್ತು ಅಸ್ಲಂಪಾಷಾಗಾಗಿ ಹುಡುಕಾಟ ನಡೆಸಿದರು. ನಾಲೆಯಲ್ಲಿ ನೀರು ಸ್ಥಗಿತ ಹಿನ್ನೆಲೆ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ನಾಲೆಯಲ್ಲಿ ಫೀರ್ ಖಾನ್ ಶವ ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಬದುಕುಳಿದ ನಯಾಜ್‌ಗೆ ಮಂಡ್ಯ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಗೆ ತೀವ್ರ ಪೆಟ್ಟಾಗಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರು ನಯಾಜ್‌ನನ್ನು 48 ಗಂಟೆಗಳ ತೀವ್ರ ನಿಗಾ ಘಟಕದಲ್ಲಿಟ್ಟಿದ್ದಾರೆ. ಮಂಡ್ಯದ ವಿಸಿ ನಾಲೆಯಲ್ಲಿ ದುರಂತಗಳ ಸರಮಾಲೆಯಾಗಿದೆ. ಅವಘಡ ಸಂದರ್ಭ ಮಾತ್ರ ಅರ್ಧಂಬರ್ಧ ಕೆಲಸ ಮಾಡುವ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದರು.