ಬೆಂಗಳೂರು:-ಬೈಕ್ ಹಾಗೂ ಬಿಎಂಟಿಸಿ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿ ಬೆಂಳೂರಿನ ಸಂಜಯ್ ನಗರದ ರಾಧಾ ಕೃಷ್ಣ ವಾರ್ಡ್ ಬಳಿ ಜರುಗಿದೆ. ಈ ಅಪಘಾತಕ್ಕೆ ಕಾರಣ ಇಲ್ಲಿನ ಬೀದಿಬದಿ ವ್ಯಾಪಾರಿಗಳು ಹಾಗೂ ಹೂವಿನ ಅಂಗಡಿಗಳು ಫುಟ್ ಪಾತ್ ಜಾಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿರುವುದೇ ಕಾರಣ.
ಇದರಿಂದ ಪಾದಚಾರಿಗಳು ಹಾಗೂ ಸವಾರರಿಗೆ ತುಂಬಾ ತೊಂದರೆ ಆಗುತ್ತಿದೆ. ಅಷ್ಟೆ ಅಲ್ಲದೇ ಯುವಕನೋರ್ವ ಪ್ರಾಣ ಬಿಟ್ಟಿದ್ದಾನೆ. ಕೂಡಲೇ ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಿಸಿಕೊಂಡ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಇನ್ನೂ ಬೀದಿಬದಿ ವ್ಯಾಪಾರಿಗಳಿಂದ ಹಲವು ದುರಂತಗಳ ನಡೆದರು ಇದುವರೆಗೂ ಬಿಬಿಎಂಪಿ ಬೀದಿಬದಿ ವ್ಯಾಪಾರಿಗಳಿಗೆ ಯಾಕೆ ಖಾಲಿ ಮಾಡಿಸುತ್ತಿಲ್ಲ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ



