ಹಾಸನ: ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಂದು ಬಲಿಯಾಗಿದೆ. ಹಾಸನ ತಾಲೂಕು,ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್(41), ಮೃತ ವ್ಯಕ್ತಿಯಾಗಿದ್ದು, ಜೋಳದ ಹೊಲಕ್ಕೆ ಗೊಬ್ಬರ ಹಾಕಿ ಮಧ್ಯಾಹ್ನ ಮನೆಗೆ ಬಂದಿದ್ದ ಗಿರೀಶ್ ಮನೆಯಲ್ಲೆ ಕುಸಿದು ಬಿದ್ದಿದ್ದಾರೆ.
Advertisement
ತಕ್ಷಣ ಹಾಸನಕ್ಕೆ ಚಿಕಿತ್ಸೆಗಾಗಿ ಕರೆ ತರುವ ವೇಳೆಗೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಗೋವಿಂದ್ ಸಾವನ್ನಪ್ಪಿದ್ದರು. ಇಂದು ಒಂದೇ ದಿನ ಹೃದಯಾಘಾತಕ್ಕೆ ಎರಡನೇ ಬಲಿಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಹೃದಯಾಘಾತಕ್ಕೆ 18 ಜನ ಸಾವನ್ನಪ್ಪಿರುವುದು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.