ಹಾಸನ:- ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಗ್ರಾಮದಲ್ಲಿ ಹೃದಯಾಘಾತದಿಂದ ಕುಳಿತಲ್ಲೇ ವ್ಯಕ್ತಿಯೋರ್ವ ಪ್ರಾಣಬಿಟ್ಟ ಘಟನೆ ಜರುಗಿದೆ.
Advertisement
ನಿರ್ವಾಣಿಗೌಡ (63) ಮೃತಪಟ್ಟ ವ್ಯಕ್ತಿ. ಇವರು ಅಡವಿಬಂಟೇನಹಳ್ಳಿ ಗ್ರಾಮದ ನಿವಾಸಿ. ಇಂದು ಮನೆಗೆ ದಿನಸಿ ಸಾಮಾಗ್ರಿಗಳನ್ನು ತರಲು ಬೈಕ್‌ನಲ್ಲಿ ಹಗರೆಗೆ ಮೃತ ನಿರ್ವಾಣಿಗೌಡ ಬಂದಿದ್ದರು. ನ್ಯಾಯಬೆಲೆ ಅಂಗಡಿ ಬಳಿ ಕುಳಿತಿದ್ದಾಗ ಇದ್ದಕಿದ್ದ ಹಾಗೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವಿನ ಪ್ರಕರಣ ಮುಂದುವರಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.