ಬಳ್ಳಾರಿ: ಸುಮಾರು 15 ದಿನಗಳಿಂದ ಬಾಣಂತಿಯ ಸಾವಿನಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆ ಮತ್ತು ಬಿಮ್ಸ್ ಗೆ ಸಾರ್ವಜನಿಕರು ಚಿಕಿತ್ಸೆಗೆ ಬರಲು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ಕೂಡ್ಲಿಗೆ ತಾಲೂಕಿನ ಹಾಲಸಾಗರ ಗ್ರಾಮದ ಮಹಾಲಕ್ಷ್ಮಿ (20) ಸಾವಿಗೀಡಾದ ಮಹಿಳೆ. ಭಾನುವಾರ ನಾರ್ಮಲ್ ಹೆರಿಗೆಯಾಗಿದ್ದ ಮಹಾಲಕ್ಷ್ಮೀಗೆ ಗಂಡು ಮಗುವಿಗೆ ಜನಿಸಿತ್ತು.
ಹೆರಿಗೆ ಬಳಿಕ ಮಹಾಲಕ್ಷ್ಮಿ ಆರೋಗ್ಯದಲ್ಲಿ ಏರುಪೇರಾಗಿತ್ತು, ಹೀಗಾಗಿ ಐಸಿಯುನಲ್ಲಿ ಇಟ್ಟು ಮೂರು ದಿನ ಚಿಕಿತ್ಸೆ ನೀಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನ ಮಹಾಲಕ್ಷ್ಮಿ ಚೆನ್ನಾಗಿದ್ದಳು ಎಂದು ದೂರಿದ್ದಾರೆ.